ಬಂಟ್ವಾಳ:ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ  ಪಿಎಂಜಿಎಸ್‌ವೈ ಯೋಜನೆಯಲ್ಲಿ ಗ್ರಾಮೀಣ ಅಭಿವೃದ್ಧಿಗೊಂಡಿದ್ದು, ಈಗ  ನಮ್ಮ ಸರಕಾರ ಪಿಎಂಜಿಎಸ್‌ವೈ ಮೂಲಕ ಅಭಿವೃದ್ಧಿಗೊಳಿಸುತ್ತಿದೆ ಎಂದು ಸಂಸದ ನಳಿನ್ ಕುನಾರ್ ಕಟೀಲ್ ಹೇಳಿದ್ದಾರೆ. ಬುಧವಾರ 9 ಕೋ.ರೂ.ವೆಚ್ಚದಲ್ಲಿ ಬಂಟ್ವಾಳ ಕ್ಷೇತ್ರದ ಬೊಲ್ಪಾದೆ-ಮಾದರಮಲೆ ರಸ್ತೆ ಅಭಿವೃಧ್ಧಿ ಕಾರ್ಯಕ್ಕೆ ಚಾಲನೆ ನೀಡಿ ಮಾತಾಡಿದ ಸಂಸದರು  ಗ್ರಾಮೀಣ ರಸ್ತೆಗಳ ಅಭಿವೃದ್ಧಿಯ ಮೂಲಕ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು  ಹೇಳಿದರು.IMG-20200715-WA0035

ಈ ಸಂಧರ್ಭದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಕಿಯೋನಿಕ್ಸ್ ನಿಗಮ ಮಂಡಳಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಜಿಲ್ಲಾ ಪಂಚಾಐತ್ ಸದಸ್ಯೆ ಕಮಲಾಕ್ಷಿ ಕೆ ಪೂಜಾರಿ, ಬಂಟ್ವಾಳ ಕ್ಷೇತ್ರ ಬಿಜೆಪಿ ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನಕಾರ್ಯದರ್ಶಿ ಡೊಂಬಯ್ಯ ಅರಳ, ಮಹಾಶಕ್ತಿಕೇಂದ್ರ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಲೋಹಿತ್ ಕೊಳ್ನಾಡು, ವಿಶ್ವನಾಥ ಪೂಜಾರಿ, ಬಾಲಕೃಷ್ಣ ಸೆರ್ಕಳ, ಪ್ರಶಾಂತ್ ಶೆಟ್ಟಿ ಅಗರಿ, ಚೆನ್ನಪ್ಪ ಗೌಡ, ಆನಂದ ಪೂಜಾರಿ, ಜಯರಾಮ ನಾಯ್ಕ, ರಾಜಾರಾಮ ಹೆಗ್ಡೆ, ಮಂಕುಡೆ ಕೃಷ್ಣ ಆಚಾರ್, ಹರೀಶ್ ಟೈಲರ್, ವೇಣುಗೋಪಾಲ್ ಮುಂತಾದವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *