ಬಂಟ್ವಾಳ: ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜು 2020ರ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 96% ವಿಜ್ಞಾನ ವಿಭಾಗದಲ್ಲಿ 81% ಹಾಗೂ ಕಲಾ ವಿಭಾಗದಲ್ಲಿ 78% ಫಲಿತಾಂಶ ಪಡೆದಿದ್ದು, ಒಟ್ಟು ಶೇಖಡಾ 86 ಫಲಿತಾಂಶ ದಾಖಲಿಸಿದೆ ಎಂದು ಕಾಲೇಜಿನ ಪ್ರಕಟಣೆ ತಿಳುಸಿದೆ.
ಒಟ್ಟು 16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 87 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರೆ, ವಾಣಿಜ್ಯ ವಿಭಾಗದಲ್ಲಿ 12 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕು. ಆಶ್ವಿತಾ 566 ಅಂಕ, ಕು. ದೀಪ್ತಿ ಎನ್. 551 ಅಂಕ, ಗೌರವ್ 550 ಅಂಕ, ಹಾಗೂ ಕು. ನವ್ಯ 550 ಅಂಕಗಳನ್ನು ಪಡೆದಿರುತ್ತಾರೆ. ಕಲಾ ವಿಭಾಗದಲ್ಲಿ 03 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, ಕು. ಫಾತಿಮತ್ ನಿಶಾ 547 ಅಂಕ, ಫಾತಿಮತ್ ಫರ್ವೀನಾ 537 ಅಂಕ, ಹಾಗೂ ಆಯಿಶತುಲ್ ಜಿಸ್ತಿಯಾ 528 ಅಂಕ ಪಡೆದಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ .
ಹಾಗೆಯೇ ವಿಜ್ಞಾನ ವಿಭಾಗದಲ್ಲಿ 03 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, ಮುರ್ಷಿದಾ ಬಾನು 522 ಅಂಕ, ಭವಿತ್ 516 ಅಂಕ ಹಾಗೂ ಮಹಮ್ಮದ್ ಆಸಿರ್ 512 ಅಂಕ ಪಡೆದಿರುತ್ತಾರೆ.
ಕಲಾ ವಿಭಾಗದಲ್ಲಿ 73 ವಿದ್ಯಾರ್ಥಿಗಳ ಪೈಕಿ 57 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು,, ವಾಣಿಜ್ಯ ವಿಭಾಗದಲ್ಲಿ 76 ವಿದ್ಯಾರ್ಥಿಗಳ ಪೈಕಿ 73 ಹಾಗೂ ವಿಜ್ಞಾನ ವಿಭಾಗದಲ್ಲಿ 21 ವಿದ್ಯಾರ್ಥಿಗಳ ಪೈಕಿ17 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
