ಬಂಟ್ವಾಳ: 2019-20 ಸಾಲಿನ ದ್ವತೀಯ ಪಿಯುಸಿ ಪರೀಕಗಷಾ ಫಲಿತಾಂಶ ಪ್ರಕಟಗೊಂಡಿದ್ದು, ಬಂಟ್ವಾಳ ತಾಲೂಕಿನ ವಾಮದಪದವು ಸರಕಾರಿ ಪ.ಪೂ.ಕಾಲೇಜಿಗೆ ಶೇ.84 ಫಲಿತಾಂಶ ಬಂದಿದ್ದರೆ,ಸಿದ್ದಕಟ್ಟೆ ಸರಕಾರಿ ಪ.ಪುಇ.ಕಾಲೇಜಿಗೆ ಶೇ.85  ಫಲಿತಾಂಶ ಬಂದಿದೆ ಎಂದು ಆಯಾಯಾ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ. ವಾಮದಪದವು ಪ.ಪೂ.ಕಾಲೇಜಿನಲ್ಲಿ ಒಟ್ಟು 169 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ,ಈ ಪೈಕಿ141 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ವಿಜ್ಞಾನ ವಿಭಾಗದಲ್ಲಿ 17ರಲ್ಲಿ 17ಮಂದಿ ತೇರ್ಗಡೆಯಾಗಿದ್ದರೆ ,ವಾಣಿಜ್ಯ ವಿಭಾಗದಲ್ಲಿ 92 ವಿದ್ಯಾರ್ಥಿ ಗಳ ಪೈಕಿ 80 ಮಂದಿ  ಹಾಗೂ ಕಲಾ ವಿಭಾಗದಲ್ಲಿ 60 ವಿದ್ಯಾರ್ಥಿ ಗಳ ಪೈಕಿ 44 ಮಂದಿ ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ. ಹಾಗೆಯೇ ಸಿದ್ದಕಟ್ಟೆ ಪ.ಪೂ.ಕಾಲೇಜಿನಲ್ಲಿ 152  ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,129 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 21 ವಿದ್ಯಾರ್ಥಿಗಳ ಪೈಕಿ 16 ಮಂದಿ ಪಾಸ್ ಆಗಿದ್ದು,ವಾಣಿಜ್ಯ ವಿಭಾಗದಲ್ಲಿ 67. ವಿದ್ಯಾರ್ಥಿ ಗಳ ಪೈಕಿ 62 ಮತ್ತು ಕಲಾ ವಿಭಾಗದಲ್ಲಿ 64 ವಿದ್ಯಾರ್ಥಿಗಳ ಪೈಕಿ 51 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *