ಬಂಟ್ವಾಳ: ಕೊರೋನ ಸೋಂಕು ಪೀಡಿತನಾದರೆ ಅದು ಆತನ ತಪ್ಪಲ್ಲ..ಅದು ಇತರ ಯಾರೋ ಒಬ್ಬ ವ್ಯಕ್ತಿಯಿಂದ ಆತನಿಗೆ ಬಂದಿರುವುದು.ಸಮಾಜ ರೋಗದ ವಿರುಧ್ಧ ಹೋರಾಡಬೇಕಿದೆ ಹೊರತು ರೋಗಿಯ ವಿರುದ್ಧ ಅಲ್ಲ.. ಹೀಗೆಂದು ಅಭಿಪ್ರಾಯ ವ್ಯಕ್ತಪಡಿಸಿದವರು ಕೊರೋನ ವಿರುದ್ಧ ಗೆದ್ದು ಬಂದ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಅವರು… ಕೊರೋನ ಪಾಸಿಟಿವ್ ನಿಂದ ಸಂಪೂರ್ಣ ಗುಣಮುಖವಾಗಿ ಮನೆಗೆ ಅಗಮಿಸಿರುವ ಅವರು ತನ್ನ ಕರೋನದ ಕಥೆಯನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಯಪಡಿಸಿದ್ದಾರೆ.

IMG_20200714_160837ಕೊರೋನ ಮಾರಣಾಂತಿಕ ಖಾಯಿಲೆಯೇ ಅಲ್ಲ,ಗಂಭೀರ ಸ್ವರೂಪದ ಇತರೆ ಖಾಯಿಲೆಗಳಾದ ಅಸ್ತಮಾ, ಶ್ವಾಸಕೋಶದ  ತೊಂದರೆ, ಉಸಿರಾಟದ ಸಮಸ್ಯೆಯಂತಹುಗಳ ಜತೆ ಕೊರೋನ ಸೇರಿಕೊಂಡಾಗ  ಕೊರೋನ ತನ್ನ ಶಕ್ತಿಯನ್ನು ವೃಧ್ದಿಸಿ ಸಮಸ್ಯೆಗಳು ಸೃಷ್ಟಿಯಾಗುತ್ತವೆ,ವಿನಹ ಕೋರೊನಾ ಎಂಬುದು ಯಾವತ್ತು ಗುಣ ಪಡಿಸಲಾಗುವ ಖಾಯಿಲೆಯಾಗಿದ್ದು ಕೊರೋನ ಬಗ್ಗೆ ಭಯ ಪಡುವ ಅವಶ್ಯಕತೆ ಇಲ್ಲ. ಕೊರೋನ ಸೋಂಕಿನಿಂದ ದೂರ ಉಳಿಯಬೇಕಾದರೆ ಪ್ರತಿ ನಿತ್ಯ ಕಡ್ಡಾಯವಾಗಿ ಮಾಸ್ಕ್ ಧರಿಸುವುದು,ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯ ಓಡಾಟ ನಡೆಸದಿರುವುದು,ಸಾಮಾಜಿಕ ಅಂತರ ಕಡ್ಡಾಯ ಪಾಲಿಸುವುದು, ಇದರಲ್ಲಿ ಯಾವುದೇ ಕೀಳರಿಮೆ ಬೇಡ.. ನಮ್ಮ ರಕ್ಷಣೆ,ನಮ್ಮ ಹೊಣೆಯಾಗಿದೆ ಎಂದಿದ್ದಾರೆ.
ಆಸ್ಪತ್ರೆಗೆ ದಾಖಲು:   ಜು.1 ರಂದು ಸಣ್ಣ ಜ್ವರದ ಲಕ್ಷಣ ಮತ್ತು ಸ್ವಲ್ಪ ಕೆಮ್ಮು ಕಾಣಿಸಿಕೊಂಡಾಗ ಮಾಮೂಲಿ ಶೀತ ಜ್ವರ ಎಂದು ಎರಡು ದಿನ ಮನೆಯಲ್ಲೇ ವಿಶ್ರಾಂತಿ ಪಡೆದುಕೊಂಡೆ. ಆದರೆ ಜ್ವರ ಕಡಿಮೆಯಾಗದಿದ್ದಾಗ  ಶಾಸಕ ರಾಜೇಶ್ ನಾಯ್ಕ್ ರಲ್ಲಿ ವಿಷಯ ತಿಳಿಸಿದೆ. ಮಂಗಳೂರಿಗೆ ತೆರಳಿ ಕೋವಿಡ್ ಪರೀಕ್ಷೆ  ಮಾಡಿಸುವಂತೆ ಸಲಹೆ ನೀಡಿದರು.ಜು. 3 ರಂದು  ಮಂಗಳೂರು ಖಾಸಗಿ ಆಸ್ಪತ್ರೆಗೆ ತೆರಳಿ ಗಂಟಲು ದ್ರವದ ಮಾದರಿ ಪರೀಕ್ಷೆಗೆ ನೀಡಿದೆ.ಅದೇ ದಿನ ಸಂಜೆ ಫಲಿತಾಂಶ ಬರಬೇಕಿತ್ತು. ಆದರೆ ಬಾರದಿದ್ದರಿಂದ  ಕೊನೆಗೆ   ನಾನೇ ಸ್ವತಹ ಮಂಗಳೂರಿಗೆ ತೆರಳಿ ಎ.ಜೆ ಆಸ್ಪತ್ರೆಗೆ ದಾಖಲಾದೆ. ಶಾಸಕರು ಆಸ್ಪತ್ರೆಗೆ ದಾಖಲಾಗಲು ಎಲ್ಲ ವ್ಯವಸ್ಥೆ ಮಾಡಿಸಿದರು. ಆದಿತ್ಯವಾರ ಮಧ್ಯಾಹ್ನದ ವೇಳೆಗೆ ನನ್ನ ಗಂಟಲುದ್ರವದ ವರದಿ ಫಾಸಿಟಿವ್ ಎಂಬುದಾಗಿ ನನಗೆ ಮಾಹಿತಿ ಲಭಿಸಿತು. ಯಾವುದಾದರೊಂದು ವರದಿಯ ನೀರಿಕ್ಷೆಯಲ್ಲಿದ್ದ ನನಗೆ ವರದಿ ಆ ಕ್ಷಣಕ್ಕೆ ಏನೂ ಪರಿಣಾಮ ಬೀರಿಲ್ಲ. ಮನೆಯವರಿಗೆ ವಿಷಯ ನಾನೇ ತಿಳಿಸಿ ಧೈರ್ಯ ತುಂಬಿದೆ. ಮನೆಯವರು ಗಾಬರಿಯಾಗಿಲ್ಲ ಎಂಬುದು ನನಗೂ ಧೈರ್ಯ ತಂದುಕೊಟ್ಟಿತು. ಮಿಕ್ಕಿದೆಲ್ಲವನ್ನೂ ಎದುರಿಸಲು ತಯಾರಾಗಿದ್ದೆ. ಆದಿತ್ಯವಾರ ಸಂಜೆ ವೇಳೆ ನನಗೆ ಚಿಕಿತ್ಸೆ ಆರಂಭಿಸಲಾಯಿತು. ಬುಧವಾರದಿಂದ ಆದಿತ್ಯವಾರದವರೆಗೆ 5 ದಿನ ನನಗೆ ಯಾವುದೇ ಚಿಕಿತ್ಸೆಯೂ ಸಿಕ್ಕಿರಲಿಲ್ಲ. ಅಲ್ಪ ಪ್ರಮಾಣದ ಸಕ್ಕರೆಖಾಯಿಲೆಯೂ ಇತ್ತು. ಅದೂ ಕಂಟ್ರೋಲ್ ನಲ್ಲಿ ಇದ್ದರೂ 5 ದಿನ ಅದಕ್ಕೂ ಚಿಕಿತ್ಸೆ ಪಡೆದಿರಲಿಲ್ಲ. ಆದಿತ್ಯವಾರ ರಾತ್ರಿಯ ವೇಳೆ ನನ್ನ ಜ್ವರ ಮತ್ತು ಕೆಮ್ಮು ವಾಸಿಯಾಯಿತು. ಸೋಮವಾರ ಬೆಳಗ್ಗಿನಿಂದಲೇ ಮತ್ತೆ ಈ ಹಿಂದಿನ ಆರೋಗ್ಯ ಸ್ಥಿತಿಗೆ ಮರಳಿದೆ.ಅವಾಗಲೇ ನನಗೆ ಕೋವಿಡ್ ಧೃಡ ಪಟ್ಟ ಬಗ್ಗೆ ಬಹಳಷ್ಟು ಪ್ರಚಾರವಾಗಿತ್ತು. ನೂರಾರು ದೂರವಾಣಿ ಕರೆಗಳು ಬರಲಾರಂಭಿಸಿತು.ಸಾಂತ್ವಾನದ ನುಡಿಗಳು,
ಎಚ್ಚರಿಕೆಯ ಸಲಹೆಗಳು,ಶುಭ ಹಾರೈಕೆಗಳು ಈ ಕರೆಯಲ್ಲಿತ್ತು.ಆದರೆ ನನ್ನ ವರದಿ  ತಿಳಿದು ಬಂದ ಒಂದೇ ದಿನದಲ್ಲಿ ನಾನು ಚೇತರಿಸಿಕೊಂಡಿದ್ದೆ.ನನ್ನ ಸಂಪರ್ಕದಲ್ಲಿದ್ದ ಅದೆಷ್ಟೋ ಬಂಧು ಮಿತ್ರರು ಆತಂಕದಲ್ಲಿದ್ದರು.ಅವರಿಗೆ ಧೈರ್ಯ ತುಂಬಲು ನಾನೇ ಸ್ವತಹ ವೀಡಿಯೋ ಧ್ವನಿ ಮುದ್ರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಸರಿಸಿದೆ. ಇದರಿಂದಾಗಿ ಆತಂಕದಲ್ಲಿದ್ದ ಕೆಲವೊಂದು ಜನರ ಆತಂಕ ದೂರವಾಯಿತು.ಒಂದು ವಾರಗಳ ಕಾಲ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆದು ಇದೀಗ ಫೂರ್ತಿ ಗುಣಮುಖನಾಗಿ ಸೋಮವಾರ ಆಸ್ಪತ್ರೆಯಿಂದ ಅವರು ಬಿಡುಗಡೆಗೊಂಡು ಮನೆಗೆ ಮರಳಿದ್ದಾರೆ.
ಈ ಸಂಧರ್ಭದಲ್ಲಿ ನನ್ನ ಆರೋಗ್ಯಕ್ಕಾಗಿ  ಹಾರೈಸಿದ, ಧೈರ್ಯ ತುಂಬಿದ  ಹಾಗೂ ಎ.ಜೆ ಆಸ್ಪತ್ರೆಯ ವೈದ್ಯರು, ದಾದಿಯರು ದೇವದಾಸ ಶೆಟ್ಟಿ ಅವರು ಮನದಾಳದ ನಮನ ಸಲ್ಲಿಸಿದ್ದಾರೆ.

By Suddi9

Leave a Reply

Your email address will not be published. Required fields are marked *