ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲೂಕು ಬಾಲಭವನ ಸೊಸೈಟಿ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಸಹಭಾಗಿತ್ವದಲ್ಲಿ ತಾಲೂಕಿನ ಮಕ್ಕಳಿಗಾಗಿ ಕಲಾ ಶ್ರೀ ಆಯ್ಕೆ ಶಿಬಿರ ಗುರುವಾರ ಬಿ.ಸಿ.ರೋಡಿನ ಆಶ್ರಮ ಶಾಲೆಯಲ್ಲಿ ನಡೆಯಿತು.
ತಾಲೂಕು ಪಂಚಾಯತು ಅಧ್ಯಕ್ಷ ಯಶವಂತ ದೇರಾಜೆ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ದೃಷ್ಟಿಯಿಂದ ನಿರಂತರ ಕಲಾ ಕಾರ್ಯಕ್ರಮಗಳು ನಡೆಯಬೇಕು. ಇಲಾಖೆಗಳು, ವಿವಿಧ ಸಂಘಟನೆಗಳು ಹಾಗೂ ಪೋಷಕರು ಈ ನಿಟ್ಟಿನಲ್ಲಿ ವಿಶೇಷ ಮುತುವಜರ್ಿ ವಹಿಸಬೇಕು ಎಂದು ಅವರು ಹೇಳಿದರು.
1
ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಅವಕಾಶದ ಕೊರತೆಯಿಂದ ಹಲವಾರು ಪ್ರತಿಭೆಗಳು ಬೆಳಕಿಗೆ ಬರುವುದಿಲ್ಲ. ಇಂತಹ ಪ್ರತಿಭೆಗಳನ್ನು ಬಾಲ್ಯದಲ್ಲೇ ಗುರುತಿಸಿ ಬೆಳೆಸುವಲ್ಲಿ ಹೆತ್ತವರು ಮತ್ತು ಶಿಕ್ಷಕರ ಪಾತ್ರ ಮಹತ್ತರವಾದುದು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ ಕಾರಂತ, ಕಾರ್ಯದಶರ್ಿ ಸಂಜೀವ ಪೂಜಾರಿ, ಪಧಾಧಿಕಾರಿಗಳಾದ ನಾರಾಯಣ ಹೆಗ್ಡೆ, ರಿತೇಶ್ ಬಾಳಿಗಾ, ಇಲಾಖಾಧಿಕಾರಿ ಅನ್ನಪೂರ್ಣ ಉಪಸ್ಥಿತರಿದ್ದರು.
ವಿಟ್ಲ ಸಿಡಿಪಿಓ ಸುಧಾ ಜೋಷಿ ಸ್ವಾಗತಿಸಿದರು. ಬಂಟ್ವಾಳ ಸಿಡಿಪಿಓ ಮಲ್ಲಿಕಾ ವಂದಿಸಿದರು. ಮೇಲ್ವ್ವಿಚಾರಕಿ ಪುಷ್ಪಲಾತಾ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ:9ಬಿಕಲಾಶ್ರೀ

By Suddi9

Leave a Reply

Your email address will not be published. Required fields are marked *