ಬಂಟ್ವಾಳ: ಪ್ರತಿ ಮಳೆಗಾಲದಲ್ಲಿ ಕೆರೆಗಾತ್ರದ ಹೊಂಡ ಬಿದ್ದು,ವಾಹನಸಂಚಾರಕ್ಕೆ ತೊಡಕಾಗುತ್ತಿದ್ದ ಬಿ.ಸಿ.ರೋಡಿನ ಬಸ್ ತಂಗುದಾಣ ಮತ್ತು ಯಾತ್ರಿನಿವಾಸ್ ಕಟ್ಡಡದ ಮುಂಭಾಗದ ಹೊಂಡಕ್ಕೆ ರಾ.ಹೆ.ಪ್ರಾ.ಬುಧವಾರ ಮಾಮೂಲಿಯಂತೆ ತೇಪೆ ಹಾಕುವ ಕಾರ್ಯನಡೆಸಿದೆ.ಈ ಬಾರಿಯ ಪ್ರಥಮ ಮಳೆಗೂ ಆದೇ ಜಾಗಗಳಲ್ಲಿ ಕಾಣಿಸಿಕೊಂಡ ಹೊಂಡ ಬಳಿಕ ಕೆರೆಯಗಾತ್ರದಲ್ಲಿ ವಿಸ್ತರಿಸಿದೆ.

IMG-20200709-WA0084 ಪ್ರತಿವರ್ಷವು ಇಲ್ಲಿನ ಅಂಗಡಿದಾರರು ಈ ಹೊಂಡಕ್ಕೆ ಗಿಡ ನೆಟ್ಟು ವಾಹನ ಸವಾರರಿಗೆ ಎಚ್ಚರಿಕೆ ಮೂಡಿಸುತ್ತಿದ್ದರು.ಮಾಧ್ಯಮಗಳು  ಕೂಡ ಈ ಎರಡು ಹೊಂಡದ ಬಗ್ಗೆ ವರ್ಷಂಪ್ರತಿ ಯಾಥಾವತ್ತಾಗಿ ಸಚಿತ್ರ ವರದಿ ಪ್ರಕಟಿಸಿ ಇಲಾಖೆಯ ಗಮನ ಸೆಳೆಯುತ್ತಾ ಬರುತ್ತಿದೆ. ಈ ಸಲ ಅಂಗಡಿದಾರರು ಗಿಡ ನೆಡುವ ಬದಲು ಕೆರೆಯಂತ ಹೊಂಡವಿರುವುದರಿಂದ. ಸಂಚಾರವನ್ನು ಡೈವರ್ಶನ್ ಮಾಡಲಾಗಿದೆ ಎಂದು ಫಲಕವನ್ನು ಹಾಕಲಾಗಿತ್ತು. ಈ ನಡುವೆ ಪುರಸಭೆಯ ಆರೋಗ್ಯ ವಿಭಾಗದ ಸಹಾಯಕ ಇಕ್ಬಾಲ್ ಅವರು ಜಲ್ಲಿ ಮಿಶ್ರಿತ ಸಿಮೆಂಟನ್ನು ಹಾಕಿ ಎರಡು ಹೊಂಡವನ್ನು ತಾತ್ಕಾಲಿಕವಾಗಿ ಮುಚ್ಚಿದರಾದರೂ ನಿರಂತರವಾಗಿ ಸುರಿದ ಮಳೆಗೆ ಮತ್ತು ವಾಹನಗಳ ಸಂಚಾರದ ಭರಾಟೆಗೆ ಅದು ಕಿತ್ತುಹೋಗಿತ್ತು.ಆದಾದ ಬಳಿಕ ಭಾನುವಾರದ ಲಾಕ್ ಡೌನ್ ನ್ನು ಸದುಪತೋಗಪಡಿಸಿಕೊಂಡ  ಬಿ.ಸಿ.ರೋಡಿನ ಬಿಜೆಪಿ ಕಾರ್ಯಕರ್ತರು ಈ ರಸ್ತೆ ಹೊಂಡಗಳನ್ನು ಮುಚ್ಚಿ ಗಮನಸೆಳೆದರು.ಇದರಿಂದ ಮುಖಭಂಗಕ್ಕೊಳಗಾದ ರಾ.ಹೆ.ಪ್ರಾ. ಬುಧವಾರ ಈ ಎರಡು ಪ್ರಮುಖ ಹೊಂಡಗಳನ್ನು ತೇಪೆ ಹಾಕಿ ಮುಚ್ಚಿದೆ.ಹಾಗೆಯೇ ಹೆದ್ದಾರಿಯುದ್ದಕ್ಕು ಇರುವ ಹೊಂಡಗಳಿಗೂ ಮುಚ್ಚುವ ಕಾರ್ಯ ನಡೆಸಿದೆ. ಹಲವರು ಬಿದ್ದಿದ್ದರು: ರಾತ್ರಿ ವೇಳೆ ಈ ಬೃಹತ್ ಗಾತ್ರದ ಹೊಂಡದಲ್ಲಿ ಮಳೆ ನೀರು ನಿಲ್ಲುವುದರಿಂದ ಹಲವು ವಾಹನಗಳು ಬಿದ್ದಿವೆ.   ಬೈಕ್ ಸವಾರರಂತು  ಬಿದ್ದು ಸಣ್ಣಪುಟ್ಟ ಗಾಯಗೊಂಡು ಎದ್ದು ಹೋಗಿದ್ದಾರೆ.   ಈ ಎರಡು ಪ್ರಮುಖ ಜಾಗದಲ್ಲಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಅಪಾಯಕಾರಿ ಹೊಂಡಕ್ಕೆ ಶಾಶ್ವತ ಮುಕ್ತಿ ನೀಡಬೇಕು ಎಂಬುದು ಚಾಲಕ ಸಮುದಾಯದ ಆಗ್ರಹವಾಗಿದೆ.

By suddi9

Leave a Reply

Your email address will not be published. Required fields are marked *