ಬಂಟ್ವಾಳ : ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ಯಾನೀಟೈಷನ್ ಸಿಂಪಡಿಸಲಾಗುವುದರಿಂದ ಬಿ.ಸಿ.ರೋಡಿನಲ್ಲಿರುವ ಮಿನಿವಿಧಾನಸೌಧಕ್ಕೆ ಇಂದಿನಿಂದ( ಜು.8 ರಿಂದ 10 ) ಮೂರುದಿನಗಳ ಕಾಲ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿದಿನ ಸಾರ್ವಜನಿಕರು ಬಂದು ಹೋಗುವುದರಿಂದ ಸಿಬ್ಬಂದಿಗಳಿಗೂ ಕೊರೋನ ಸೋಂಕು ಹರಡುವ ಸಾಧ್ಯತೆ ಇದ್ದು,ಈ ನಿಟ್ಟಿನಲ್ಲಿ ಮುಂಜಾಗ್ರತಾಕ್ರಮವಾಗಿಮಿನಿವಿಧಾನಸೌಧದಲ್ಲಿ ಕಾರ್ಯಾಚರಿಸುವ ಎಲ್ಲಾ ಕಚೇರಿಯನ್ನು ಮೂರುದಿನಗಳ ಕಾಲ ಸ್ಯಾನಿಟೈಷನ್ ಮಾಡಲಾಗುವುದರಿಂದ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು,ಸಾರ್ವಜನಿಕರು ಸಹಕರಿಸುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಸ್ಯಾನಿಟೈಸ್ ಸಿಂಪಡಣೆ:
ಮುಂಜಾಗೃತಾ ಕ್ರಮವಾಗಿ ಮಂಗಳವಾರ ಬಿ.ಸಿ.ರೋಡಿನ ಸಾರ್ಮಥ್ಯ ಸೌಧದಲ್ಲಿರುವ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ಕಚೇರಿ,ಬಂಟ್ವಾಳ ಪ್ರೆಸ್ ಕ್ಲಬ್ ,ಬಂಟ್ವಾಳ ನಗರ ಪೊಲೀಸ್ ಠಾಣೆ ಹಾಗೂ ವಿವಿದೆಡೆಯಲ್ಲಿ ಪುರಸಭೆಯ ವತಿಯಿಂದ ಸ್ಯಾನಿಟೈಸ್ ಮಾಡಲಾಯಿತು.ಪುರಸಭೆಯ ಆರೋಗ್ಯ ವಿಭಾಗದ ಸಹಾಯಕ ಇಕ್ಬಾಲ್ ಸಹಕರಿಸಿದರು.
