ಬಂಟ್ವಾಳ : ತಾಲೂಕಿನ ನರಿಕೊಂಬು ಗ್ರಾಮದ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದ ಮುಂಭಾಗ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾದ ೩೦ ಲಕ್ಷ ರೂ.ಅನುದಾನದಲ್ಲಿ ನಿರ್ಮಾಣವಾದ ತಡೆಗೋಡೆ ಕಾಮಗಾರಿಯ ಪ್ರಗತಿಯನ್ನು ಈಚೆಗೆ ಬಂಟ್ವಾಳ ಶಾಸಕ ರಾಜೇಶ್ ನಾÊಕ್ ಉಳಿಪ್ಪಾಡಿಗುತ್ತು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ದೇವಳದ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜಾ ಬಂಟ್ವಾಳ ಅವರು ಕಾಮಗಾರಿ ಕುರಿತು ಶಾಸಕರಿಗೆ ಮಾಹಿತಿ ನೀಡಿದರಲ್ಲದೆ ಅನುದಾನ ಒದಗಸಿದಕ್ಕೆ ಗ್ರಾಮಸ್ಥರ ಪರವಾಗಿ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು. ಕ್ಷೇತ್ರದ ಪದಾಧಿಕಾರಿಗಳಾದ ಕೇಶವ ಶಾಂತಿ, ಮೋನಪ್ಪ ಪೂಜಾರಿ, ಸಂಜೀವ ಸಪಲ್ಯ, ಚಂದ್ರಶೇಖರ ಪೂಜಾರಿ ಕಲ್ಯಾಣಾಗ್ರಹಾರ, ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಅಕ್ರಮ -ಸಕ್ರಮ ಸಮಿತಿ ಸದಸ್ಯ ರಮಾನಾಥ ರಾಯಿ, ಬಿಜೆಪಿ ಬಂಟ್ವಾಳ ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ, ನರಿಕೊಂಬು ಗ್ರಾ.ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು ಮತ್ತು ಸದಸ್ಯರು, ನಾರಾಯಣ ಪೂಜಾರಿ ದರ್ಖಾಸು, ಪ್ರಮುಖರಾದ ಪ್ರೇಮನಾಥ ಶೆಟ್ಟಿ ಅಂತರ, ಪುರುಷೋತ್ತಮ ಟೈಲರ್, ಸುರೇಶ್ ಕೋಟ್ಯಾನ್, ಗಣ್ಯರಾದ ರಘು ಸಪಲ್ಯ, ಆನಂದ ಎ.ಶಂಭೂರು, ಸದಾಶಿವ ಜಿ. ಬರಿಮಾರು, ಯತೀಶ್ ಶೆಟ್ಟಿ ಹೊಸಲಚ್ಚಿಲ್, ರವಿ ಅಂಚನ್, ಪದ್ಮನಾಭ ಕರ್ಬೆಟ್ಟು, ನವೀನ್ ಕರ್ಬೆಟ್ಟು, ಉದಯ ಕುಮಾರ್ ಶೆಟ್ಟಿ, ಸಂಜೀವ ಸಪಲ್ಯ ತಾರಿಪಡ್ಪು, ನಾರಾಯಣ ಕೇದಿಗೆ, ಜಿನರಾಜ್ ಕೋಟ್ಯಾನ್, ವಾಮನ ಕರ್ಬೆಟ್ಟು, ಪ್ರಶಾಂತ್ ಕರ್ಬೆಟ್ಟು ಮೊದಲಾದವರು ಉಪಸ್ಥಿತರಿದ್ದರು
