ಮುಂಬೈ : ಮುಂಬೈ ಬಿಲ್ಲವರ ಅಸೋಸಿಯೇಶನ್ ಕಲ್ವಾ ಸ್ಥಳೀಯ ಕಚೇರಿಯ ಮಾಜಿ ಜಂಟಿ ಕಾರ್ಯದರ್ಶಿ, ಯುವ ಸಮಾಜ ಸೇವಕ ಕಲ್ವಾ ಬುದಾಜಿನಗರಕ್ಕೆ ಹತ್ತಿರದ ಸುಮಿತ್ರಾ ಟವರ್ ನಿವಾಸಿ ವಿನಯ್ ಎಸ್ ಅಂಚನ್(42) ಜುಲೈ ಒಂದರಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು.
ಹೆಜಮಾಡಿ ಮೂಲದ ಇವರು ತಂದೆ-ತಾಯಿ, ಪತ್ನಿ, ಓರ್ವ ಪುತ್ರಿ, ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿಯನ್ನು ಅಗಲಿದ್ದಾರೆ.
