Published On: Thu, Jul 2nd, 2020

ವೀರು ಶೆಟ್ಟಿಯವರ ಹೊಸ ಸಿನಿಮಾ” ಹಾಸ್ಯ ದಿಗ್ಗಜ್ಜರೊಂದಿಗೆ ಗರಿಗೆದರಲಿದೆ ತುಳು ಚಿತ್ರ

ಚಾಲಿಪೋಲಿಲು ತುಳುಚಿತ್ರರಂಗದಲ್ಲೇ ಅದ್ಭುತ ದಾಖಲೆ ಮಾಡಿದ ಸಿನಿಮಾ. ಈ ಚಿತ್ರ 511 ದಿನ ಪ್ರದರ್ಶನ ಕಾಣುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸುವುದರ ಜತೆಗೆ ಪರಭಾಷಿಗರು ಕೋಸ್ಟಲ್‌ವುಡ್‌ನಂತ ತಿರುಗಿ ನೋಡುವಂತೆ ಮಾಡಿತ್ತು. ಇದರ ಕೀರ್ತಿ ನಿರ್ದೇಶಕ ವೀರೇಂದ್ರ ಶೆಟ್ಟಿಗೆ ಸಲ್ಲುತ್ತದೆ.90cdac66-dd7a-45a0-91fb-ab2047feaa4e

ಇದೀಗ ವೀರೇಂದ್ರ ಶೆಟ್ಟಿ ಮತ್ತೆ ಕೋಸ್ಟಲ್‌ವುಡ್‌ನತ್ತ ಮುಖ ಮಾಡಿದ್ದಾರೆ. ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು ಈ ಹಾಸ್ಯ ದಿಗ್ಗಜ್ಜರು ಮತ್ತೆ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುವ ಕಥೆಯೊಂದನ್ನು ಸಿದ್ಧಪಡಿಸಿದ್ದು, ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ.e6793a12-2b8f-42fa-923b-bc2be35a10a5

ಚಾಲಿಪೊಲಿಲು ಬಳಿಕ ವೀರೇಂದ್ರ ಶೆಟ್ಟಿ ಕೆಲವು ವರ್ಷಗಳ ಗ್ಯಾಪ್ ಕೊಟ್ಟು ಕನ್ನಡದಲ್ಲಿ ‘ಸವರ್ಣದೀರ್ಘ ಸಂಧಿ’ ಸಿನಿಮಾ ನಿರ್ದೇಶಿಸಿ, ನಟಿಸಿ ಸೈ ಎನಿಸಿಕೊಂಡಿದ್ದರು. ಬಳಿಕ ಮತ್ತೊಂದು ಕನ್ನಡ ಸಿನಿಮಾ ನಿರ್ದೇಶನಕ್ಕೆ ತಯಾರಿ ನಡೆಸಿದ್ದರೂ ಕರೊನಾ ಮಹಾಮಾರಿಯಿಂದಾಗಿ ಆ ಯೋಜನೆಯನ್ನು ಸ್ವಲ್ಪದಿನ ಮುಂದೂಡಿ ತುಳುವಿನತ್ತ ಗಮನ ವಹಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆಯಾದರೆ ನವೆಂಬರ್ ಮೊದಲ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ಈ ಸಿನಿಮಾ ತುಳುವಿನಲ್ಲಿ ಕೆಲವೊಂದು ಹೊಸ ದಾಖಲೆಗಳಿಗೆ ಕಾರಣವಾಗಲಿದೆ ಎನ್ನುತ್ತಾರೆ ವೀರೇಂದ್ರ ಶೆಟ್ಟಿ.9ef7b54f-ca56-4175-b01a-56806b3e66cb

ಚಾಲಿಪೋಲಿಲು ಸಿನಿಮಾದಲ್ಲಿ ತುಳುನಾಡಿನ ಈ ನಾಲ್ವರು ಮಾಡಿದ ಮೋಡಿಗೆ ಜನ ಫುಲ್ ಫಿದಾ ಆಗಿದ್ದರು. ತುಳು ನಾಟಕಗಳಲ್ಲಿ ಹೊಟ್ಟೆ ಹುಣ್ಣಾಗುವಷ್ಟು ನಗಿಸುವ ಅವರ ಕಾಂಬಿನೇಷನ್ ಬೆಳ್ಳಿ ಪರದೆ ಮೇಲೂ ಹೊಸ ಸಂಚಲನ ಮೂಡಿಸಿತ್ತು. ಈ ಕಲಾವಿದರು ಒಂದೇ ಸಿನಿಮಾದಲ್ಲಿ ಅಭಿನಯಿಸಿದ್ದು, ಬೆರಳೆಣಿಕೆಯಷ್ಟು ಮಾತ್ರ. ಆದರೆ ಬಂದಿರುವ ಹೆಚ್ಚಿನ ಸಿನಿಮಾಗಳು ಸೂಪರ್‌ಹಿಟ್ ಆಗಿತ್ತು. ವೀರು ಶೆಟ್ಟಿಯವರ ಹೊಸ ಸಿನಿಮಾ ಏನು ಮೋಡಿ ಮಾಡಲಿದೆ ಎನ್ನುವುದನ್ನು ಕಾದುನೋಡಬೇಕಾಗಿದೆ.

* ರಚನ್

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter