ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಸಜೀಪ ಮೂಡ ಹಾಗೂ ಸಜೀಪ ಮುನ್ನೂರು ಗ್ರಾಮ ಸಮಿತಿಯ ವತಿಯಿಂದ    ಚೀನಾದ ಕುತಂತ್ರ ವಿರುದ್ದ ಹೋರಾಡಿ ಹುತಾತ್ಮರಾದ ಭಾರತೀಯ ಸೇನೆಯ ವೀರಯೋಧರಿಗೆ ನುಡಿನಮನ ಕಾರ್ಯಕ್ರಮ ಕಂದೂರು ಮಾಚಿದೇವ ಸಭಾಭವನದಲ್ಲಿ  ನಡೆಯಿತು.
ಅತಿಥಿಯಾಗಿದ್ದ ವಿಧಾನಪರಿಷತ್ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹುತಾತ್ಮ ಸೈನಿಕರಿಗೆ ನುಡಿನಮನ ಸಲ್ಲಿಸಿ ಮಾತನಾಡಿದರು,ಕರ್ನಾಟಕ ಸರಕಾರದ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಸೈನಿಕರಾದ ಭಾಸ್ಕರ ಅಮ್ಟೂರು, ನಿವೃತ್ತ ಸೈನಿಕರಾದ ಹವಲ್ದಾರ್ ರಾಜೇಂದ್ರ ಮರ್ತಾಜೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ,ಭಾಜಪ ಮುಖಂಡರಾದ ಶ್ರೀಕಾಂತ್ ಶೆಟ್ಟಿ ಸಂಕೇಶ, ಯಶವಂತ ದೇರಾಜೆ ಹಾಗೂ ಪರಿವಾರ ಸಂಘಟನೆಗಳ ಪ್ರಮುಖರು,ಕಾರ್ಯಕರ್ತರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *