ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯತ್ ನಲ್ಲಿ ಐದು ವರ್ಷ ಅಧಿಕಾರದ ಅವಧಿ ಪೊರೈಸಿದ ಅಮ್ಟಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರೀಶ್ ಶೆಟ್ಟಿ ಪಡುರವರಿಗೆ ಸಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನ ಕಾರ್ಯಕ್ರಮ ಇಂದು ನಡೆಯಿತು.8d1c796f-04a2-4442-b53b-0cdda856b715

ನನ್ನ ಅಧಿಕಾರ ಅವಧಿಯಲ್ಲಿ ನನಗೆ ಮಾರ್ಗದರ್ಶನದೊಂದಿಗೆ ಸಂಪೂರ್ಣ ಸಲಹೆ ಸಹಕಾರವನ್ನಿತ್ತ ಉಪಾಧ್ಯಕ್ಷರಿಗೆ,ಪಂಚಾಯತ್ ಅಧಿಕಾರಿಗಳಿಗೆ, ಗ್ರಾಮ ಲೆಕ್ಕಾಧಿಕಾರಿ, ಪಂಚಾಯತ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ, ಕಾರ್ಯಕರ್ತರಿಗೆ ಹಾಗೂ ಗ್ರಾಮಸ್ಥರಿಗೆ ಹಾಗೂ ಇನ್ನಿತರ ಎಲ್ಲರಿಗೂ ಅನಂತನಂತ ಧನ್ಯವಾದಗಳು. ಹಾಗೂ ನನ್ನ ಅವಧಿಯಲ್ಲಿ‌ ಯಾವುದೆ ಭ್ರಷ್ಟಾಚಾರವಿಲ್ಲದೆ ಜನಪರ ಸೇವೆ ಹಾಗೂ ಆಡಳಿತ ಮಾಡಿದ ಹೆಮ್ಮೆನನಗೆ ಇದೆ ಎಂದು ಸನ್ಮಾನ ಸ್ವೀಕರಿಸಿ ಮಾತನಾಡಿದರು.cd003d8e-46b8-4283-ae5d-99bea05fca9a (1)

ಇಂದು ನಡೆದ ಕೃತಜ್ಞತಾ ಸಮಾರಂಭದಲ್ಲಿ 19  ಪಂಚಾಯತ್ ಸದಸ್ಯರಿಗೆ 14 ಪಂಚಾಯತ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಯವರಿಗೆ ಹಾಗೂ 16 ಜನ ಪಂಪ್ ಆಪರೇಟರ್ ರವರಿಗೆ ಐದು ವರ್ಷ ಪೂರ್ಣ ಗೊಳಿಸಿದ ಈ ಸಂದರ್ಭದಲ್ಲಿ ಅಧ್ಯಕ್ಷರಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.

9d830777-37b6-43e3-a132-8d8546dd6bbdಈ ಸಂದರ್ಭದಲ್ಲಿ  ಅಭಿವೃದ್ಧಿ ಅಧಿಕಾರಿ, ಇಂಜಿನಿಯರ್, ಉಪಾಧ್ಯಕ್ಷರು ಸಹಿತ ಪಂಚಾಯತ್ ಸದಸ್ಯರು, ಪಂಚಾಯತ್ ಅಧಿಕಾರಿಗಳು ಸಿಬ್ಬಂದಿ ವರ್ಗ, ಪಂಪ್ ಆಪರೇಟರ್  ಸ್ಥಳೀಯ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತರು, ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಅಧ್ಯಕ್ಷರಿಗೆ ಶುಭ ಹಾರೈಸಿದರು.

By Suddi9

Leave a Reply

Your email address will not be published. Required fields are marked *