ಕೈಕಂಬ:ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆ ವತಿಯಿಂದ 2019- 20 ನೇ ಸಾಲಿನ ಪ್ರಾಕೃತಿಕ ವಿಕೋಪ ಪರಿಹಾರ ಕಾಮಗಾರಿ ಯೋಜನೆಯಡಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಮರವೂರು ಆದ್ಯಪಾಡಿ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 61 ಲಕ್ಷದ ಯೋಜನೆಗಳನ್ನು ಶನಿವಾರ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ವೀಕ್ಷಿಸಿದರು.79039043-b4fe-457b-bc3e-25e75306048c

ಮರವೂರು ಆದ್ಯಪಾಡಿ ಕಂದಾವರ ರಸ್ತೆ ಕಿ.ಮೀ 2.00 ರಲ್ಲಿ ಎಡಬದಿ ಗುಡ್ಡ ಜರಿದಿರುವ ಭಾಗದ ರಕ್ಷಣಾ ತಡೆಗೋಡೆ 35 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ, ಮರವೂರು ಅದ್ಯಪಾಡಿ ಕಂದಾವರ ರಸ್ತೆ ಕಿ.ಮೀ 4.80 ರಲ್ಲಿ (ಕಲ್ಲಾಪು ರಸ್ತೆ) ಎಡಬದಿ ಗುಡ್ಡ ಅಗೆದಿರುವ ಭಾಗಕ್ಕೆ ರಕ್ಷಣಾ ತಡೆಗೋಡೆ ಆರು ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ, ಮರವೂರು ಅದ್ಯಪಾಡಿ ಕಂದಾವರ ರಸ್ತೆ ಕಿ.ಮೀ 2 ರಲ್ಲಿ ಎಡಬದಿ ಗುಡ್ಡ ಜರಿದಿರುವ ಭಾಗಕ್ಕೆ ರಕ್ಷಣಾ ತಡೆಗೋಡೆಯನ್ನು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ, ಮರವೂರು ಅದ್ಯಪಾಡಿ ಕಂದಾವರ ರಸ್ತೆ ಕಿ.ಮೀ 4.50 ಎಡಬದಿ ಗುಡ್ಡ ಜರಿದಿರುವ ಜಾಗಕ್ಕೆ ( ಚರ್ಚ್ ಹಿಂಭಾಗ) ರಕ್ಷಣಾ ತಡೆಗೋಡೆ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು ಶನಿವಾರ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ವೀಕ್ಷಿಸಿದರು.

b18548b5-f4d3-42d2-ab69-777ae8ceeff3
ಶಾಸಕರೊಂದಿಗೆ ತಾಲೂಕು ಪಂಚಾಯತ್ ಸದಸ್ಯರಾದ ವಿಶ್ವನಾಥ ಶೆಟ್ಟಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿರಣ್ ಕುಮಾರ್ ಕೋಡಿಕಲ್, ಮಂಡಲ ಉಪಾಧ್ಯಕ್ಷರಾದ ಅಮೃತಲಾಲ್ ಡಿಸೋಜಾ, ಮಂಡಲ ಕಾರ್ಯದರ್ಶಿ ಶೋಧನ್ ಅದ್ಯಪಾಡಿ, ಪಂಚಾಯತ್ ಸದಸ್ಯರಾದ ಯಾದವ ಕುಲಾಲ್, ಅಮರನಾಥ್ ಶೆಟ್ಟಿ , ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶಿವಪ್ಪ ಬಂಗೇರ, ಬಿಜೆಪಿ ಮುಖಂಡರಾದ ನಾಗೇಶ್ ಕುಲಾಲ್, ವಿನೋದ್ ದೇವಾಡಿಗ, ತುಕಾರಾಮ್ ಶೆಟ್ಟಿ, ಮಿಥುನ್, ಆದಿನಾಥೇಶ್ವರ ಭಜನಾ ಮಂಡಳಿ ಅಧ್ಯಕ್ಷರಾದ ಚಂದ್ರಹಾಸ ದೇವಾಡಿಗ, APMC ಸದಸ್ಯರಾದ ಪ್ರವೀಣ್ ಭಟ್ ಸಹಿತ ಪಕ್ಷದ ಕಾರ್ಯಕರ್ತರು, ನಾಗರಿಕರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *