ಬಂಟ್ವಾಳ: ಎ.ಸಿ.ಉಪವಿಭಾಗ ಕಚೇರಿ ಮತ್ತು ಎ.ಆರ್.ಟಿ.ಒ. ಕಚೇರಿಯನ್ನು ಶೀಘ್ರವೇ ಮಂಜೂರು ಮಾಡುವ ಭರವಸೆಯನ್ನು ಉಸ್ತುವಾರಿ ಸಚಿವ ಬಿ.ರಮನಾಥ ರೈ ನೀಡಿದ್ದಾರೆ. ಅವರು ಕಚೇರಿಯಲ್ಲಿ ಕರೆದ ಪತ್ರಿಕಾಗೊಷ್ಟಿಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದರು. ನಗರದಲಲಿ ಎಲ್ಲವನ್ನು ಮಾಡುವ ಕನಸು ನನ್ನದು ಆ ಹಿನ್ನಲೆಯಲ್ಲಿ ವಿರೋದಗಳನ್ನು ಸರಿಪಡಿಸಿ ಬಂಟ್ವಾಳ ಪುರಸಭೆಯನ್ನು ನಗರ ಸಭೆಯನ್ನಾಗಿ ಮಾಡಲು ತಯಾರಿ ನಡೆಸಿದ್ದೇನೆ. ಸಮೀಕ್ಷೆ ನಡೆಯುವ ಸಂದರ್ಭ ವಿರೋದಗಳು ಬಂದರೆ ಒತ್ತಾಯಕ್ಕೆ ಮಾಡುವುದಿಲ್ಲ. ನನಗೆ ಅಪವಾಧ ಬರುವ ಯಾವುದೇ ಜನವಿರೋದಿ ಕೆಲಸಗಳನ್ನು ಮಾಡುವುದಿಲ್ಲ, ಯಾವ ಯೋಚನೆ ಮತ್ತು ಯೋಜನೆ ಇದ್ದರು ಅದು ಸಮಾಜದ ಹಿತದೃಷ್ಟಿಯಿಂದ ಎಂದರು.
ಮುಂದಿನ ತಿಂಗಳು ನೂತನ ಬಸ್ ನಿಲ್ದಾಣದ ಕಾಮಗಾರಿ ಆರಂಭವಾಗುತ್ತದೆ. ಸಮಗ್ರ ಕುಡಿಯುವ ಯೋಜನಗೆ 52ಕೋಟಿ 79ಲಕ್ಷ ಮತ್ತು ಒಳಚರಂಡಿ ಯೋಜನೆ ಪೂರ್ಣಗೊಳಿಸಲು 48ಕೋಟಿ 50ಲಕ್ಷ ಮಂಜೂರಾತಿ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ಸಂಚಾರಿ ಪೊಲೀಸ್ಠಾಣೆ
ರಾಷ್ಟ್ರೀಯ ಹೆದ್ದಾರಿ,ರಾಜ್ಯ ಹೆದ್ದಾರಿಗಳು ಹಾದು ಹೋಗುವ ಬಿ.ಸಿ.ರೋಡು ಜಿಲ್ಲೆಯ ವಾಹನದಟ್ಟಣೆಯ ಪ್ರದೇಶವಾಗಿ ಗುರುತಿಸಲ್ಪಟ್ಟಿದೆ. ಇಲಾಖೆಯ ಸಮೀಕ್ಷೆ ಪ್ರಕಾರ ಬಿ.ಸಿ.ರೋಡಿನ ಮೂಲಕ ದಿನವೊಂದಕ್ಕೆ ಸುಮಾರು 7000ದಿಂದ 8000 ಘನವಾಹನಗಳು,3000ದಿಂದ 4000 ಲಘುವಾಹನಗಳು ಹಾಗೂ ಸುಮಾರು 2000 ಅಟೋರಿಕ್ಷಾ ಮತ್ತು ಮೋಟಾರು ಸೈಕಲ್ಲುಗಳು ಓಡಾಡುತ್ತಿವೆ. ಇತ್ತೀಚೆಗೆ ವಾಹನದಟ್ಟಣೆಯಿಂದ ಸುಗಮ ಸಂಚಾರ ಸಾಧ್ಯವಾಗದೆ ಪ್ರಯಾಣಿಕರು ಕಷ್ಟಪಡುತ್ತಿರುವುದು ಸಾಮಾನ್ಯವಾಗಿದೆ.ಈ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸ್ ಠಾಣೆಯನ್ನು ತೆರೆಯಲು ಬೇಡಿಕೆ ಸಲ್ಲಿಸಲಾಗಿತ್ತು. ಇದೀಗ ಸರಕಾರವು ಬಂಟ್ವಾಳ ತಾಲೂಕಿನಲ್ಲಿ ಸಂಚಾರಿ ಪೊಲೀಸ್ ಠಾಣೆಯನ್ನು ತೆರೆಯಲು ಮಂಜೂರಾತಿ ನೀಡಿದ್ದು ದಿನಾಂಕ 3.9.2014ರಂದು ಅಧಿಕೃತ ಆದೇಶ ಹೊರಡಿಸಲಾಗಿದೆ.
ಬಂಟ್ವಾಳಕ್ಕೆ ಪೊಲೀಸ್ ಉಪವಿಭಾಗ
ಪುತ್ತೂರು ಪೊಲೀಸ್ ಉಪವಿಭಾಗವು ಕಳೆದ 50ವರ್ಷಗಳಿಂದ ಒಂದೇ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು ಇದರ ವ್ಯಾಪ್ತಿ 4000ಚ.ಕಿ.ಮೀಟರ್ಗಿಂತಲೂ ಹೆಚ್ಚಿನ ಉದ್ದದ ಕೇರಳ ರಾಜ್ಯದ ಗಡಿಭಾಗವನ್ನು ಹೊಂದಿದೆ. ಆದುದರಿಂದ ಆಡಳಿತ ಹಿತ ದೃಷ್ಟಿಯಿಂದ ಪುತ್ತೂರು ಉಪವಿಭಾಗವನ್ನು ವಿಭಜಿಸಿ ಬಂಟ್ವಾಳ ಪೊಲೀಸ್ ಉಪವಿಭಾಗವನ್ನು ಸೃಜಿಸಲು ಸರಕಾರವು ಮಂಜೂರಾತಿ ನೀಡಿದೆ. ಈ ಉಪವಿಭಾಗವು ಬಂಟ್ವಾಳ ನಗರ,ಬಂಟ್ವಾಳ ಗ್ರಾಮಾಂತರ,ವಿಟ್ಲ,ಬೆಳ್ತಂಗಡಿ, ಪುಂಜಾಲಕಟ್ಟೆ, ವೇಣೂರು ಪೊಲೀಸ್ ಠಾಣೆ ಹಾಗೂ ಧರ್ಮಸ್ಥಳ ಉಪಠಾಣೆಯನ್ನು ಹೊಂದಿರುತ್ತದೆ. ಬಂಟ್ವಾಳ ಪೊಲೀಸ್ ಉಪವಿಭಾಗಕ್ಕೆ ಡಿವೈಎಸ್ಪಿ ಹಾಗೂ ನಾಲ್ಕು ಮಂದಿ ಸಿಬ್ಬಂದಿಗಳನ್ನು ಸರಕಾರವು ನೇಮಿಸಲಿದೆ.
ಬಿ.ಸಿ.ರೋಡಿಗೆ ಕೆ.ಎಸ್.ಆರ್.ಟಿ.ಸಿ ನೂತನ ಬಸ್ಸ್ತಂಗುದಾಣ
ಬಿ.ಸಿ.ರೋಡಿನಲ್ಲಿ ಬಸ್ಸ್ತಂಗುದಾಣ ನಿಮರ್ಾಣವಾಗಬೇಕೆಂಬುದು ಬಹುಕಾಲದ ಬೇಡಿಕೆಯಾಗಿದೆ. ಇದೀಗ ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಬಸ್ಸು ತಂಗುದಾಣ ನಿಮರ್ಾಣಕ್ಕೆ ರೂ.7ಕೋಟಿ 39 ಲಕ್ಷ ಅನುದಾವನ್ನು ಬಿಡುಗಡೆಗೊಳಿಸಿದ್ದು ನಿಗಮದ ಕಾಮಗಾರಿ ಇಲಾಖೆಯು ಕಾಮಗಾರಿಯ ಟೆಂಡರ್ ಕರೆದಿದೆ. ಕಾಮಗಾರಿಯನ್ನು 15 ತಿಂಗಳುಗಳಲ್ಲಿ ಪೂರ್ಣಗೊಳಿಸಿ ನಿಗಮಕ್ಕೆ ಬಿಟ್ಟುಕೊಡುವ ಶರ್ತವನ್ನು ನಿಗಮವು ವಿಧಿಸಿದೆ.
ಮಿನಿ ವಿಧಾನ ಸೌಧ
ಸರಕಾರದ ಎಲ್ಲಾ ಇಲಾಖೆಗಳ ಕಛೇರಿಗಳು ಒಂದೇಕಡೆ ಜನರಿಗೆ ಲಭ್ಯವಾಗಬೇಕೆಂಬ ಉದ್ದೇಶದಿಂದ ನಿಮರ್ಿಸಲಾಗುತ್ತಿರುವ ಮಿನಿ ವಿಧಾನಸೌಧ ಕಟ್ಟಡವು ಪ್ರಕೃತ ಬಂಟ್ವಾಳ ತಾಲೂಕಿಗೆ ಮಂಜೂರಾಗಿದೆ. ರೂ.5ಕೋಟಿ ವೆಚ್ಚದಲ್ಲಿ ಬಿ.ಸಿ.ರೋಡಿನಲ್ಲಿ ನಿಮರ್ಾಣವಾಗಲಿರುವ ಕಟ್ಟಡದ ಅಂದಾಜುಪಟ್ಟಿ ಮತ್ತು ನಕ್ಷೆಗೆ ಆಡಳಿತಾತ್ಮಕ ಅನುಮೋದನೆ ಲಭ್ಯವಾಗಿದ್ದು ಶೀಘ್ರವೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ
ನದಿಯ ನೀರನ್ನು ಬಳಸಿ ಹಲವು ಗ್ರಾಮಗಳನ್ನು ಒಂದೇ ಯೋಜನೆಯಲ್ಲಿ ಅಳವಡಿಸಿ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಎಲ್ಲ ಗ್ರಾಮಗಳು ಸೇರ್ಪಡೆಗೊಂಡಿವೆ.ಒಟ್ಟು 49 ಗ್ರಾಮಗಳಿಗೆ ನೀರು ಒದಗಿಸುವ ಒಟ್ಟು 125 ಕೋಟಿ ಮೊತ್ತದ ಈ ಯೋಜನೆಗೆ ಸರಕಾರವು ಒಪ್ಪಿಗೆ ನೀಡಿದ್ದು ಕೇಂದ್ರ ಹಾಗೂ ರಾಜ್ಯ ಸರಕಾರಗಳು ವೆಚ್ಚವನ್ನು ಭರಿಸಲಿವೆ.
ಯೋಜನೆಗಳ ವಿವರ:
ಕ್ರ.ಸಂ. ಯೋಜನೆಯ ಘಟಕ ಅಂದಾಜು ಮೊತ್ತ ಯೋಜನೆಯ ಹಂತ
1 ಕರೋಪಾಡಿ ಮತ್ತು ಇತರ ನಾಲ್ಕು ಗ್ರಾಮಗಳು 22ಕೋಟಿ 40ಲಕ್ಷ ಟೆಂಡರ್ ಪ್ರಕ್ರಿಯೆಯಲ್ಲಿದೆ
2 ಸಂಗಬೆಟ್ಟು ಮತ್ತು ಇತರ ಹದಿನೈದು ಗ್ರಾಮಗಳು 29ಕೋಟಿ 2ಲಕ್ಷ ,,
3 ಮಾಣಿ ಮತ್ತು ಇತರ ಏಳು ಗ್ರಾಮಗಳು 16ಕೋಟಿ 47ಲಕ್ಷ ಅಂದಾಜುಪಟ್ಟಿ ತಾಂತ್ರಿಕ ಮಂಜೂರಾತಿ ಹಂತದಲ್ಲಿದೆ
4 ನರಿಕೊಂಬು ಇತರ ನಾಲ್ಕು ಗ್ರಾಮಗಳು 12ಕೋಟಿ61ಲಕ್ಷ ,,
5 ಸರಪಾಡಿ ಮತ್ತು ಇತರ 10ಗ್ರಾಮಗಳು 26ಕೋಟಿ97ಲಕ್ಷ ,,
6 ಸಜೀಪಮುನ್ನೂರು ಹಾಗೂ ಇತರ ಮೂರು ಗ್ರಾಮಗಳು 18 ಕೋಟಿ 3ಲಕ್ಷ ರಾಜ್ಯ ತಾಂತ್ರಿಕ ಪ್ರಾಧಿಕಾರದ ಅನುಮೋದನೆ ಹಂತದಲ್ಲಿದೆ
ಪ್ರವಾಸೋದ್ಯಮ ಇಲಾಖೆಯ ವತಿಯಿಂದ ನಬಾಡರ್್ ಆರ್.ಐ.ಡಿ.ಎಫ್-19ರಲ್ಲಿ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ರಥಬೀದಿಯನ್ನು ಸಂಪಕರ್ಿಸುವ ಕೂಡುರಸ್ತೆ ಅಭಿವೃದ್ಧಿಗೆ ರೂ1ಕೋಟಿ 32ಲಕ್ಷ ಅನುದಾನ ಬಿಡುಗಡೆಯಾಗಿದೆ. ನರಹರಿ ಬೆಟ್ಟದ ರಸ್ತೆ ಅಭಿವೃದ್ಧಿಗೆ ರೂ.33ಲಕ್ಷ ಅನುದಾನ ಬಿಡುಗಡೆಯಾಗಿದೆ. ಇವೆರಡು ಕಾಮಗಾರಿಗಳಿಗೆ ಶೀಘ್ರವೇ ತಾಂತ್ರಿಕ ಮಂಜೂರಾತಿ ಲಭಿಸಲಿದ್ದು ಬಳಿಕ ಟೆಂಡರ್ ಪ್ರಕ್ರಿಯೆ ನಡೆಯಲಿದೆ.
ಲೋಕೋಪಯೋಗಿ ಇಲಾಖೆಗೆ ನಬಾಡರ್್ ಆರ್.ಐ.ಡಿ.ಎಫ್-19 ರಲ್ಲಿ ಮಂಜೂರಾದ 2 ಕೋಟಿ 65 ಲಕ್ಷ ಅನುದಾನದಲ್ಲಿ ಕೆಳಗೆ ವಿವರಿಸಿದ ಕಾಮಗಾರಿಗಳು ಅನುಮೋದನೆಗೊಂಡಿವೆ.
ಸಾಲೆತ್ತೂರು-ಪಡೆಕುಂಜ ರಸ್ತೆ-80.00 ಲಕ್ಷ ವೆಚ್ಚದಲ್ಲಿ ಕಾಮಗಾರಿ ಆರಂಭಗೊಂಡಿದೆ.
ಪಾಣೆಮಂಗಳೂರು ಪೇಟೆ ರಸ್ತೆಯ ಸೇತುವೆ ಪುನರ್ನಿಮರ್ಾಣ ರೂ 1 ಕೋಟಿ 26 ಲಕ್ಷ ಮಂಜೂರಾಗಿದ್ದು ಟೆಂಡರ್ ಕರೆಯಲಾಗಿದೆ.
ಸೋನರ್ಾಡು ಎಂಬಲ್ಲಿ ರೂ.60ಲಕ್ಷ ವೆಚ್ಚದಲ್ಲಿ ಸೇತುವೆ ನಿಮರ್ಾಣಕ್ಕಾಗಿ ಟೆಂಡರ್ ಕರೆಯಲಾಗಿದೆ.
ಬಂಟ್ವಾಳದಲ್ಲಿ ಹೊಸ ನಿರೀಕ್ಷಣಾ ಮಂದಿರ ನಿಮರ್ಾಣಕ್ಕಾಗಿ ರೂ.1ಕೋಟಿ ಅನುದಾನ ಮಂಜೂರಾಗಿದ್ದು ಕಟ್ಟಡದ ನಕ್ಷೆಯು ತಯಾರಿಕಾ ಹಂತದಲ್ಲಿದೆ.
2014-15ನೇ ಸಾಲಿನ ವಿಶೇಷಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಗಳಲ್ಲಿ ಈ ಕೆಳಗಿನ ಕಾಮಗಾರಿಗಳು ಒಟ್ಟು ರೂ,90ಲಕ್ಷ ವೆಚ್ಚದಲ್ಲಿ ನಿಮರ್ಾಣಗೊಳ್ಳಲಿದ್ದು ಟೆಂಡರ್ ಹಂತದಲ್ಲಿದೆ.
ಬಡಗಕಜೆಕಾರು ಗ್ರಾಮದ ಕರ್ಲ ರಸ್ತೆ -ರೂ.15ಲಕ್ಷ
ಎಲಿಯನಡುಗೋಡು ಗ್ರಾಮದ ಉಪ್ಪಿರ ರಸ್ತೆ -ರೂ.10ಲಕ್ಷ
ಸರಪಾಡಿ ಗ್ರಾಮದ ಮಠದಬೆಟ್ಟು ರಸ್ತೆ -ರೂ.12ಲಕ್ಷ
ಸಂಗಬೆಟ್ಟು ಗ್ರಾಮದ ಮಾದಾಯಿ ರಸ್ತೆ -ರೂ.13ಲಕ್ಷ
ಬಡಗಬೆಳ್ಳೂರು ಗ್ರಾಮದ ಮೈಪಡ್ಕ ರಸ್ತೆ -ರೂ.12ಲಕ್ಷ
ಮಣಿನಾಲ್ಕೂರು ಗ್ರಾಮದ ಮೀಯಾರು ಪಲ್ಕೆ ಆಚಾರಿಬೆಟ್ಟು ರಸ್ತೆ -ರೂ.15ಲಕ್ಷ
ಪಿಲಾತಬೆಟ್ಟು ಗ್ರಾಮದ ದುಗ್ಗಮಾರು ಗುಡ್ಡೆ ರಸ್ತೆ -ರೂ.13ಲಕ್ಷ
ನಬಾಡರ್್ ಸಂಸ್ಥೆಯು ಆರ್.ಐ.ಡಿ.ಎಫ್-19ರ ಯೋಜನೆಯಡಿ ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿಗೆ ಕೊಠಡಿಗಳ ನಿಮರ್ಾಣಕ್ಕಾಗಿ ರೂ.50ಲಕ್ಷ ಅನುದಾನ ಬಿಡುಗಡೆ ಮಾಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ.
ಪ.ಜಾತಿ ಮತ್ತು ಪ.ಪಂಗಡದ ಕಾಲನಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಸರಕಾರದ ಯೋಜನೆಯಲ್ಲಿ ಈ ಕೆಳಗಿನ ರಸ್ತೆಗಳ ಕಾಂಕ್ರಿಟೀಕರಣಕ್ಕಾಗಿ ಒಟ್ಟು ರೂ.1ಕೋಟಿ 20ಲಕ್ಷ ಅನುದಾನ ಮಂಜೂರು ಮಾಡಲಾಗಿದೆ.
ಪೆರಾಜೆ ಗ್ರಾಮದ ಮಡಲ ರಸ್ತೆ -ರೂ.10ಲಕ್ಷ
ಕಡೇಶ್ವಾಲ್ಯ ಗ್ರಾಮದ ಬೆಂಡೆಗುರಿ ರಸ್ತೆ -ರೂ.10ಲಕ್ಷ
ಕನ್ಯಾನ ಗ್ರಾಮದ ಮರ್ತನಾಡಿ ರಸ್ತೆ -ರೂ.10ಲಕ್ಷ
ಬಡಗಕಜೆಕಾರು ಗ್ರಾಮದ ಕರ್ಲ ರಸ್ತೆ -ರೂ.10ಲಕ್ಷ
ಸರಪಾಡಿ ಗ್ರಾಮದ ಅಂಬೇಡ್ಕರ್ನಗರ ರಸ್ತೆ -ರೂ.10ಲಕ್ಷ
ಅರಳ ಗ್ರಾಮದ ಶುಂಠಿಹಿತ್ತಿಲು ರಸ್ತೆ -ರೂ.10ಲಕ್ಷ
ಮಾಣಿ ಗ್ರಾಮದ ಪಲ್ಲತ್ತಿಲ-ನೆಲ್ಲಿ ರಸ್ತೆ -ರೂ.10ಲಕ್ಷ
ಸ.ಮುನ್ನೂರು ಗ್ರಾಮದ ಕಾನ್ಸಾಲೆ ರಸ್ತೆ -ರೂ.10ಲಕ್ಷ
ನಾವೂರು ಗ್ರಾಮದ ಮಲೆಕೋಡಿ ರಸ್ತೆ -ರೂ.10ಲಕ್ಷ
ಬರಿಮಾರು ಗ್ರಾಮದ ಕೇವ ರಸ್ತೆ -ರೂ.10ಲಕ್ಷ
ಬಾಳ್ತಿಲ ಗ್ರಾಮದ ಕಿಂಞನಬೈಲು ರಸ್ತೆ -ರೂ.10ಲಕ್ಷ
ಪಿಲಾತಬೆಟ್ಟು ಗ್ರಾಮದ ಪುಂಚೋಡಿ ರಸ್ತೆ -ರೂ.10ಲಕ್ಷ
ಸಮಾಜಕಲ್ಯಾಣ ಇಲಾಖೆಯು ತಲಾ ರೂ.10ಲಕ್ಷ ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನಗಳ ನಿಮರ್ಾಣಕ್ಕಾಗಿ ಒಟ್ಟು ರೂ.50ಲಕ್ಷ ವೆಚ್ಚದಲ್ಲಿ ಅನುದಾನ ಮಂಜೂರು ಮಾಡಿದ್ದು ಈ ಕೆಳಗಿನ ಪ್ರದೇಶಗಳನ್ನು ಆಯ್ಕೆಮಾಡಲಾಗಿದೆ. ಸೂಕ್ತ ನಿವೇಶನಗಳನ್ನು ಗುರುತಿಸಿದ ಬಳಿಕ ನಿಮರ್ಾಣಕಾರ್ಯ ಆರಂಭಗೊಳ್ಳಲಿದೆ.
ತ ಕನ್ಯಾನ ಗ್ರಾಮದ ನಂದರಬೆಟ್ಟು
ತ ಚೆನ್ನೈತ್ತೋಡಿ ಗ್ರಾಮದ ಬಸ್ತಿಕೋಡಿ
ತ ವಿಟ್ಲಪಡ್ನೂರು ಗ್ರಾಮದ ಕಡಂಬು
ತ ಕಾವಳಮೂಡೂರು ಗ್ರಾಮದ ಕೈಲಾರು
ತ ಬಾಳ್ತಿಲ ಗ್ರಾಮದ ಬಿ.ಆರ್.ನಗರ
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕೈಗೊಳ್ಳಲು 2014-15ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ವಿವೇಚನಾ ನಿಧಿಯಡಿ ರೂ.5 ಕೋಟಿ ಅನುದಾನ ಒದಗಿಸಲು ಸರಕಾರದ ತಾತ್ವಿಕ ಅನುಮೋದನೆ ಲಭಿಸಿದೆ.
ನಿರ್ಮಲ ಬಂಟ್ವಾಳ -ವಿಶೇಷ ಅಭಿಯಾನ
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ,ಅರಣ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ನೈರ್ಮಲ್ಯವನ್ನು ನಿರಂತರ ಕಾಪಾಡಿಕೊಂಡು ಬರಲು ನಿರ್ಮಲ ಬಂಟ್ವಾಳ ಎಂಬ ವಿಶೇಷ ಅಭಿಯಾನವನ್ನು ಕೈಗೆತ್ತಿಕೊಳ್ಳಲು ಕಾರ್ಯಯೋಜನೆ ರೂಪಿಸಲಾಗುವುದು. ಸ್ವಚ್ಛತಾ ಕಾರ್ಯಕ್ಕೆ ಅಗತ್ಯವಿರುವ ವಾಹನಗಳು,ಯಂತ್ರಗಳು,ದ್ರವ-ಘನ ತ್ಯಾಜ್ಯಗಳ ವಿಲೇವಾರಿಗೆ ಬೇಕಾಗುವ ತಾಂತ್ರಿಕ ಸೌಲಭ್ಯಗಳು,ಪುರಸಭೆ ವ್ಯಾಪ್ತಿಯ ಎಲ್ಲಾ ಮನೆಗಳಲ್ಲಿ ಕೊಳೆಯುವ ಮತ್ತು ಕೊಳೆಯದ ಕಸಗಳ ಸಂಗ್ರಹಕ್ಕೆ ಪ್ರತ್ಯೇಕ ಕಸ ಸಂಗ್ರಹಣಾ ತೊಟ್ಟಿಗಳು,ನಾಲ್ಕು ಸುಸಜ್ಜಿತ ಶೌಚಾಲಯ ಇತ್ಯಾದಿಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಒದಗಿಸಲಾಗುವುದು.
ಪ್ಲಾಸ್ಟಿಕ್ ತ್ಯಾಜ್ಯಗಳ ನಿಯಂತ್ರಣ, ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.ನಗರದಲ್ಲಿ ಖಾಲಿ ಇರುವ ಸ್ಥಳಗಳಲ್ಲಿ ಅರಣ್ಯ ಇಲಾಖೆಯಿಂದ ಉದ್ಯಾನಗಳನ್ನು ನಿಮರ್ಿಸಿ ಆಕರ್ಷಣೀಯಗೊಳಿಸಲಾಗುವುದು. ಪ್ರಥಮ ಹಂತದಲ್ಲಿ ರಾಜ್ಯದಲ್ಲಿ ಬಂಟ್ವಾಳ ನಗರವನ್ನು ಯೋಜನೆಗೆ ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡಿದ್ದು ಮುಂದೆ ಇದನ್ನು ವಿಸ್ತರಿಸುವ ಉದ್ದೇಶವಿದೆ.
ಕಾರಿಂಜೇಶ್ವರ ದೇವಸ್ಥಾನದ ಬಳಿ ದೈವೀವನ
ಕಾವಳಪಡೂರು ಗ್ರಾಮದ ಕಾರಿಂಜೇಶ್ವರ ದೇವಸ್ಥಾನದ ಸುತ್ತಮುತ್ತ ಅರಣ್ಯ ಇಲಾಖೆ ವತಿಯಿಂದ ದೈವೀವನ ನಿಮರ್ಿಸಲು ಉದ್ದೇಶಿಸಲಾಗಿದ್ದು ಔಷದೀಯ ಹಾಗೂ ಇನ್ನಿತರ ಜಾತಿಯ 50.000 ಸಸಿಗಳನ್ನು ಬೆಳೆಸಲಾಗುತ್ತದೆ. ಕಳೆದ ವರ್ಷ ರೂ10 ಲಕ್ಷ ಹಾಗೂ ಈ ವರ್ಷ ರೂ 40 ಲಕ್ಷ ಅನುದಾನಕ್ಕೆ ಮಂಜೂರಾತಿ ನೀಡಲಾಗಿದ್ದು ಈ ವರ್ಷ ಕಾಮಗಾರಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.
ಸಿರಿಚಂದನ ವನ
ವೀರಕಂಬ ರಕ್ಷಿತಾರಣ್ಯದ ಕಲ್ಮಲೆ ಎಂಬಲ್ಲಿ ಸುಮಾರು 75 ಎಕ್ರೆ ಪ್ರದೇಶದಲ್ಲಿ ಪ್ರಾಕೃತಿಕವಾಗಿ ಬೆಳೆದ ಶ್ರೀಗಂಧದ ಸಸಿಗಳ ರಕ್ಷಣೆ ಹಾಗೂ ಬೆಳೆಸುವ ಕೆಲಸಗಳಿಗಾಗಿ ಸಿರಿಚಂದನವನ ಯೋಜನೆಯಲ್ಲಿ ರೂ 57.40 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ.ಈ ಯೋಜನೆಯಲ್ಲಿ ಈ ಪ್ರದೇಶಕ್ಕೆ ಚೈನ್ಲಿಂಕ್ ಮೆಫ್ವೈರ್ ಬೇಲಿಯ ರಕ್ಷಣೆ ನೀಡಿ ಪ್ರವೇಶಗೇಟ್ಗಳನ್ನು ಅಳವಡಿಸಲಾಗುವುದು. ವೀಕ್ಷಣಾ ಗೋಪುರ, ವಾಚರ್ಶೆಡ್, ಕೊಳವೆಬಾವಿ ಸೌಲಭ್ಯಗಳನ್ನು ಒದಗಿಸಲಾಗುವುದು.
ಬಂಟ್ವಾಳ ನಿರೀಕ್ಷಣಾ ಮಂದಿರದ ಸುತ್ತ ಖಾಲಿ ಇರುವ ಪ್ರದೇಶದಲ್ಲಿ ಟ್ರೀ ಪಾಕರ್್ ನಿಮರ್ಿಸಲು ಕೂಡಾ ಇಲಾಖೆ ವತಿಯಿಂದ ಕಾರ್ಯಕ್ರಮ ರೂಪಿಸಲಾಗಿದೆ.ಈ ವರ್ಷ ವಿವಿಧ ಯೋಜನೆಗಳಲ್ಲಿ 92.50 ಹೆಕ್ಟೇರ್ ಹಾಗೂ 11 ಕಿ.ಮೀ ವ್ಯಾಪ್ತಿಯಲ್ಲಿ ರಸ್ತೆ ಬದಿ ನೆಡುತೋಪು ಬೆಳೆಸಿರುವುದಲ್ಲದೇ 11500 ಸಸಿಗಳನ್ನು ರೈತರಿಗೆ ವಿತರಿಸಲಾಗಿದೆ. ಮಗುವಿಗೊಂದು ಮರ ಶಾಲೆಗೊಂದು ವನ ಯೋಜನೆಯಲ್ಲಿ 3550 ಸಸಿಗಳನ್ನು ವಿತರಿಸಲಾಗಿದೆ.
ಕನ್ಯಾನಕ್ಕೆ ಪ್ರಥಮದಜರ್ೆ ಕಾಲೇಜು
2014-15ನೇ ಶೈಕ್ಷಣಿಕ ವರ್ಷದಿಂದ ಕನ್ಯಾನದಲ್ಲಿ ಹೊಸದಾಗಿ ಪ್ರಥಮದಜರ್ೆ ಕಾಲೇಜು ತೆರೆಯಲು ಸರಕಾರ ಅನುಮತಿ ನೀಡಿದೆ. ಕಲಾ,ವಾಣಿಜ್ಯ ಮತ್ತು ಬಿಬಿಎಂ ಕೋಸರ್ುಗಳನ್ನು ಒಳಗೊಂಡಿದೆ.
ಹೆಚ್ಚುವರಿ ಹೋಬಳಿ ಕೇಂದ್ರಗಳು
ಆರ್.ಟಿ.ಸಿ ಹಾಗೂ ಇತರ ಅಜರ್ಿ ಸಲ್ಲಿಕೆಗಾಗಿ ತಾಲೂಕು ಕಛೇರಿಯಲ್ಲಿ ಜನರು ಸಮಸ್ಯೆ ಎದುರಿಸುತ್ತಿರುವುದನ್ನು ಮನಗಂಡು ತಾಲೂಕಿಗೆ ಹೆಚ್ಚುವರಿ ಮೂರು ಹೋಬಳಿ ಕೇಂದ್ರಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರ ಮಂಜೂರು ಗೊಳ್ಳಲಿದೆ. ವಿಟ್ಲ ಹೋಬಳಿ ವಿಭಾಗಗೊಂಡು ಮಾಣಿಯಲ್ಲಿ ಹೆಚ್ಚುವರಿ ಹೋಬಳಿ ಕೇಂದ್ರ ಸ್ಥಾಪನೆಗೊಳ್ಳಲಿದೆ. ಬಂಟ್ವಾಳ ಹೋಬಳಿಯನ್ನು ವಿಭಜಿಸಿ ಕಾವಳಮೂಡೂರಿನಲ್ಲಿ ಹೆಚ್ಚುವರಿ ಕೇಂದ್ರ ಹಾಗೂ ಪಾಣೆಮಂಗಳೂರು ಕೇಂದ್ರ ವಿಭಜನೆಗೊಂಡು ಮುಡಿಪಿನಲ್ಲಿ ಹೆಚ್ಚುವರಿ ಕೇಂದ್ರ ಸ್ಥಾಪನೆಗೊಳ್ಳಲಿದೆ.
ಶಾಲಾ ವಿದ್ಯಾಥರ್ಿಗಳ ಜಾತಿ ಆದಾಯ ದೃಢಪತ್ರಗಳಿಗಾಗಿ ಕಛೇರಿಗೆ ಅಲೆಯುವುದನ್ನು ತಪ್ಪಿಸಲು ಅವರು ಆಯಾ ಶಾಲೆಗಳಲ್ಲೇ ಅಜರ್ಿ ಸಲ್ಲಿಸಿ ದೃಢಪತ್ರಗಳನ್ನು ಶಾಲೆಗೆ ತಲುಪಿಸಲು ಸರಕಾರ ಆದೇಶಿಸಿತ್ತು. ಬಂಟ್ವಾಳ ತಾಲೂಕಿನಲ್ಲಿ 26000 ವಿದ್ಯಾಥರ್ಿಗಳು ಅಜರ್ಿ ಸಲ್ಲಿಸಿದ್ದು ಅವರಿಗೆ ದ್ವಿಪ್ರತಿಗಳಲ್ಲಿ ಈಗಾಗಲೇ ದೃಢಪತ್ರಗಳನ್ನು ವಿತರಿಸಲಾಗಿದೆ. ಆರ್.ಟಿ.ಸಿ ಯಲ್ಲಿ ಹೆಸರು,ಸ.ನಂಬ್ರ,ವಿಸ್ತೀರ್ಣ ತಪ್ಪಾಗಿ ದಾಖಲಾಗಿ ಸಮಸ್ಯೆ ಎದುರಿಸುತ್ತಿದ್ದ ಸಾರ್ವಜನಿಕರ ಅನುಕೂಲಕ್ಕಾಗಿ ಕಂದಾಯ ಅದಾಲತ್ಗಳನ್ನು ನಡೆಸಲಾಗುತ್ತಿದೆ. ಸಹಾಯಕ ಆಯುಕ್ತರ ನೇತೃತ್ವದಲ್ಲಿ ಈಗಾಗಲೇ 16 ಅದಾಲತ್ಗಳನ್ನು ತಾಲೂಕಿನಲ್ಲಿ ನಡೆಸಲಾಗಿದ್ದು 801 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿವೆ.
ಬಂಟ್ವಾಳ ಪುರಸಭೆಗೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ರೂ.52ಕೋಟಿ 79ಲಕ್ಷ ಅನುದಾನ ಮಂಜೂರಾಗಿದೆ. ಒಳಚರಂಡಿ ಯೋಜನೆ ಪೂರ್ಣಗೊಳಿಸಲು ರೂ.48ಕೋಟಿ 50ಲಕ್ಷ ಮೊತ್ತದ ಅಂದಾಜು ಪಟ್ಟಿಯನ್ನು ಮಂಜೂರಾತಿಗಾಗಿ ಸಲ್ಲಿಸಲಾಗಿದೆ.
