ಬಂಟ್ವಾಳ: ಪುಂಜಾಲಕಟ್ಟೆ ಪ್ರಾ.ಆ. ಕೇಂದ್ರದ ವತಿಯಿಂದ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯತ್‍ಗಳ ಸಹಯೋಗದಲ್ಲಿ ಗ್ರಾಮಮಟ್ಟದಲ್ಲಿ ಸ್ವಚ್ಛತಾ ಕಾರ್ಯಕ್ರಮದ ಪ್ರಯುಕ್ತ ಸೊಳ್ಳೆತಾಣಗಳ ನಾಶ ಕಾರ್ಯಕ್ರಮ ಜೂ.23 ಮತ್ತು ಜೂ.24ರಂದು ನಡೆಯಿತು. ಪುಂಜಾಲಕಟ್ಟೆ ಪ್ರಾ.ಆ. ಕೇಂದ್ರದ ವ್ಯಾಪ್ತಿಯ ಪಿಲಾತಬೆಟ್ಟು, ಇರ್ವತ್ತೂರು,ಕಾವಳಮೂಡೂರು, ಕಾವಳಪಡೂರು, ಬಡಗಕಜೆಕಾರು, ಉಳಿ ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಕಾರ್ಯಕ್ರಮ ನಡೆಸಲಾಯಿತು.

IMG-20200624-WA0074 ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರದ ವೈದ್ಯಾ„ಕಾರಿ ಡಾ. ಸತೀಶ್ ಎಂ.ಸಿ. ಮತ್ತು ಆಯುಷ್ ವೈದ್ಯಾ„ಕಾರಿ ಡಾ.ಸೋಹನ್ ಕುಮಾರ್‍ಅವರ ಮಾರ್ಗದರ್ಶನದಲ್ಲಿ ಪಂಚಾಯತ್‍ಗಳಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

IMG-20200624-WA0073
ಆರೋಗ್ಯ ಇಲಾಖೆ ಸಿಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಸಿಬಂದಿಗಳು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರ ಸಹಕಾರದಲ್ಲಿ ರಸ್ತೆ ಬದಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ಗುರುತಿಸಿ ಲಾರ್ವಾಗಳನ್ನು ನಾಶಪಡಿಸಲಾಯಿತು. ಜಾಗೃತಿಗಾಗಿ ಕರಪತ್ರಗಳ ಮೂಲಕ ಮಾಹಿತಿ ನೀಡಲಾಯಿತು.

IMG-20200624-WA0071
ಪಿಲಾತಬೆಟ್ಟು ಗ್ರಾ.ಪಂ. ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ, ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಉಪಾಧ್ಯಕ್ಷೆ ಲಕ್ಷ್ಮಿ ಜೆ.ಬಂಗೇರ, ಪಂ.ಅ.ಅಧಿಕಾರಿ ರಾಜಶೇಖರ ರೈ, ತು.ರ.ವೇ.ಬಂಟ್ವಾಳ ಅಧ್ಯಕ್ಷ ರಮೇಶ್ ಶೆಟ್ಟಿ ಮಜಲೋಡಿ, ಪಿಲಾತಬೆಟ್ಟು ಸಹಕಾರಿ ಸಂಘದ ನಿರ್ದೇಶಕ ಪಿ.ಎಂ.ಪ್ರಭಾಕರ, ಅಬ್ದುಲ್ ರಹಿಮಾನ್, ಪಂಚಾಯತ್ ಸಿಬಂದಿಗಳು ಉಪಸ್ಥಿತರಿದ್ದರು.

IMG-20200624-WA0075 IMG-20200624-WA0076

By Suddi9

Leave a Reply

Your email address will not be published. Required fields are marked *