ಬಂಟ್ವಾಳ:    ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಆಶ್ರಯದಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ಜಗನ್ನಾಥ್ ರಾವ್ ಜೋಶಿ ಅವರ ಜನ್ಮಶತಾಭ್ದಿಯ ಆಚರಣೆ ಬಿ.ಸಿ.ರೋಡ್ ನ ಪಕ್ಷದ ಕಚೇರಿಯಲ್ಲಿ ನಡೆಯಿತು.

IMG-20200624-WA0021 (1)ಈ ಸಂದರ್ಭ ಜಿಲ್ಲಾ ಪ್ರ.ಕಾರ್ಯದರ್ಶಿ ರಾಮದಾಸ ಬಂಟ್ವಾಳ ಮಾತನಾಡಿ ಜೋಶಿ ಅವರು ನಡೆದ ಹಾದಿ  ಸಾಮಾನ್ಯ ಕಾರ್ಯಕರ್ತರಿಗೆ ಮಾರ್ಗದರ್ಶನ ಆಗಿತ್ತು. ಒಂದು ದೇಶದಲ್ಲಿ ದೋ ವಿಧಾನ್ ದೋ ಪ್ರಧಾನ್ ದೋ ನಿಶಾನ್ ನಹೀ ಚಲೇಗ ಎಂಬ ಘೋಷವಾಕ್ಯ ವನ್ನು ಕಾರ್ಯಕರ್ತರಿಗೆ ನೀಡಿದ್ದರು ಅದು ಸಾಕರಗೊಳಿಸಿದ ವರ್ಷ ೨೦೨೦ ಆಗಿದೆ ಎಂದರು.

IMG-20200624-WA0024ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರವರು ಮಾತನಾಡಿ ಯಾವುದೇ ಸೌಲಭ್ಯಗಳಿಲ್ಲದ ಸಮಯದಲ್ಲಿ ಅವರು ಪಕ್ಷ ಕಟ್ಟಿದ ರೀತಿ ಮತ್ತು ಅವರ ಕನಸುಗಳು ಈಡೇರಿದ ವರ್ಷ ಇದಾಗಿದ್ದು,. ನಮ್ಮಂತಹ ಸಾಮಾನ್ಯ ಕಾರ್ಯಕರ್ತರಿಗೆ ಪ್ರಾತಃ ಸ್ಮರಣೀಯರು ಎಂದರು.

IMG-20200624-WA0023ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷ ವಹಿಸಿದ್ದರು. ಕ್ಷೇತ್ರದ ಪ್ರ.ಕಾರ್ಯದರ್ಶಿಗಳಾದ ರವೀಶ್ ಶೆಟ್ಟಿ ಸ್ವಾಗತಿಸಿ, ಡೊಂಬಯ್ಯ ಅರಳ ವಂದಿಸಿದರು. ಜಿಲ್ಲಾ ಪ್ರಮುಖರಾದ ಸಂದೇಶ್ ಶೆಟ್ಟಿ ಅರೆಬೆಟ್ಟು, ಪಕ್ಷದ ಪದಾಧಿಕಾರಿಗಳು, ಎಲ್ಲಾ ಮೋರ್ಚಾಗಳ ಪ್ರಮುಖರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *