ಅಡ್ಡೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಗುರುಪುರ ಗ್ರಾಮ ಪಂಚಾಯತಿ ಗೊಳಪಟ್ಟ ಅಡ್ಡೂರಿನ ಪಾಂಡೇಲ್ ಎಂಬಲ್ಲಿ ಕಳೆದ ಹಲವಾರು ವರ್ಷಗಳಿಂದ ರಸ್ತೆಯಿಲ್ಲದೆ ಇಲ್ಲಿಯ ಜನರು ಬಹಳ ಕಷ್ಟ ಅನುಭವಿಸುತ್ತಿದ್ದಾರೆ.d3482c13-8f84-4a2f-a33c-107ef7a9dbe7

ಮಳೆಗಾಲದಲ್ಲಿ  ಇಲ್ಲಿಯ ನಾಗರಿಕರು ಅಡ್ಡೂರಿನ ಪಾಂಡೇಲ್ ಮನೆಯಿಂದ  ಮುಖ್ಯ ರಸ್ತೆಗೆ  ಹೋಗಬೇಕಾದರೆ  ಹರಸಾಹಸ ಪಡಬೇಕಾಗುತ್ತದೆ. ಶಾಲೆ, ಮದ್ರಸಕ್ಕೆ ಹೋಗುವ ಚಿಕ್ಕ ಮಕ್ಕಳು, ವ್ರಧ್ಧರು, ಅಂಗವಿಕಲರು ಈ ಪ್ರದೇಶದಲ್ಲಿ ಸುಮಾರು ಹತ್ತು ಇಪ್ಪತು ಮನೆಗಳಿದ್ದು ಇಲ್ಲಿಯ ಪ್ರದೇಶದ ಜನರಿಗೆ ನಡೆದಾಡಲು  ಸರಿಯಾದ ರಸ್ತೆ ಇಲ್ಲ  ಈ ಬಗ್ಗೆ  ಗ್ರಾಮ ಪಂಚಾಯತ್ ಗೆ  ಮನವಿ ನೀಡಿದರು ಪ್ರಯೋಜನವಾಗಿಲ್ಲ.

ಈ ಭಾಗದ  ಆಳವಾದ ಚರಂಡಿಯಲ್ಲಿ ನೀರು ತುಂಬಿ ರಭಸದಿಂದ ಹರಿಯುತ್ತಿದ್ದು, ಎಲ್ಲಿಯಾದರೂ  ಆಯ ತಪ್ಪಿ ಮಕ್ಕಳು, ವಯಸ್ಕರು, ಕಾಲುಜಾರಿ ಬಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ಇಲ್ಲಿಯ ನಾಗರಿಕರು  ಮಾಧ್ಯಮದವರಲ್ಲಿ ದೂರಿದ್ದಾರೆ.

ಆದ್ದರಿಂದ ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಇಲ್ಲಿಯ  ಚರಂಡಿಗೆ ಕಾಂಕ್ರೀಟೀಕರಣ ಮಾಡಿ ರಸ್ತೆ ನಿರ್ಮಿಸಿಲು ಪಿಡಿಓ ಹಾಗೂ ಪಂಚಾಯತಿ ಅಧಿಕಾರಿಯಲ್ಲಿ  ಮನವಿ ಮಾಡಿದ್ದಾರೆ.

By suddi9

Leave a Reply

Your email address will not be published. Required fields are marked *