ಬಂಟ್ವಾಳ: ಪಾಣೆಮಂಗಳೂರು ಕಸ್ಬಾ ಗ್ರಾಮದ ಗುಡ್ಡೆಅಂಗಡಿಯಲ್ಲಿ ನಿರ್ಮಾಸಲುದ್ದೇಶಿಸಲಾದ ಗ್ಯಾಸ್ ಪಂಪನ್ನು ವಿರೋಧಿಸಿ ಗುಡ್ಡೆಅಂಗಡಿ ಪರಿಸರದ ನಾಗರಿಕರು ಜಿಲ್ಲಾಧಿಕಾರಿ ಭೇಟಿಯಾಗಿ ಮನವಿ ಸಲ್ಲಿಸಲಾಯಿತು.

ಈ ಗ್ಯಾಸ್ ಪಂಪ್ ನಿಂದ ಅದರ ಪಕ್ಕದಲ್ಲಿ ವಾಸವಿರುವ ಜನಸಾಮಾನ್ಯರಿಗೆ ಅಪಾಯಕಾರಿಯಾಗಿದೆ, ಇದಿಲ್ಲಿ ಸ್ಥಾಪನೆಯ ಇದರ ಬಗ್ಗೆ ಸ್ಥಳೀಯರಿಗೂ ಮಾಹಿತಿ ಇಲ್ಲದಿದ್ದು,ಸ್ಥಳೀಯರ ಅಭಿಪ್ರಾಯ ಪಡೆಯದೇ ಗೌಪ್ಯವಾಗಿ ಸ್ಥಾಪಿಸಲು ಮುಂದಾಗಿರುವುದು ಸರಿಯಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಹಾಗೆಯೇ ಬಂಟ್ವಾಳ ಪುರಸಭೆ, ತಹಶೀಲ್ದಾರ್, ಗ್ರಾಮ ಲೆಕ್ಕಿಗ, ಅಗ್ನಿ ಶಾಮಕ ದಳ, ಪರಿಸರ ಇಲಾಖೆ, ಪೋಲೀಸ್ ಠಾಣೆಗೂ ಸ್ಥಳೀಯರು ಮನವಿ ಸಲ್ಲಿಸಿ ಆತಂಕ ವ್ಯಕ್ತಪಡಿಸಿದ್ದಾರೆ.ಇದಕ್ಕೆ ಅನುಮತಿ ನೀಡಿದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
