ಬಂಟ್ವಾಳ:  ಪಾಣೆಮಂಗಳೂರು ನೇತ್ರಾವತಿ ನದಿಕಿನಾರೆಯಲ್ಲಿ ವ್ಯಕ್ತಿಯೊಬ್ಬರ ಶವ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ. ಮೃತ ವ್ಯಕ್ತಿಯ ಜೇಬಿನಲ್ಲಿ ದೊರೆತ ಗುರುತಿನ ಚೀಟಿಯ. ಆಧಾರದಲ್ಲಿ ಮೃತನನ್ನು ಬೆಂಗಳೂರು ನಿವಾಸಿ ಶ್ರೀನಿವಾಸ್ ಎಂದು ಗುರುತಿಸಲಾಗಿದ್ದು, ಬಂಟ್ವಾಳ ಪೊಲೀಸರು  ವಾರೀಸುದಾರರನ್ನು ಶೋಧಿಸುತ್ತಿದ್ದಾರೆ.

ಪಾಣೆಮಂಗಳೂರಿನ ಭಯಂಕೇಶ್ವರ ದೇವಸ್ಥಾನದ ಬಳಿಯ ನದೀ ತಟದಲ್ಲಿಶವವನ್ನು ಕಂಡ ಸ್ಥಳೀಯ ಮುಖ್ತಾರ್ ಅಕ್ಕರಂಗಡಿ ಎಂಬವರು ಶವವನ್ನು ದಡಕ್ಕೆ ಎಳೆದು ತಂದಿದ್ದಾರೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By Suddi9

Leave a Reply

Your email address will not be published. Required fields are marked *