ಬಂಟ್ವಾಳ : ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆ ಹಾಗೂ ಗಾಳಿಗೆ ಬಂಟ್ವಾಳ ತಾಲುಇಕಿನ ವಿವಿದೆಡೆ ಮನೆಗಳಿಗೆ ಹಾನಿಯಾಗಿದ್ದು,ಅಪಾರನಷ್ಟ ಉಂಟಾಗಿದೆ.ಗ್ರಾಮೀಣಪ್ರದೇಶದಲ್ಲಿ ಮಳೆಗೆ ಗುಡ್ಡ,ಮನೆಗಳು ಜರಿದುಬಿದ್ದಿರುವ ಬಗ್ಗೆಯು ವರದಿಯಾಗಿದೆ.
ಕಾವಳಪಡೂರು ಗ್ರಾಮದ ಕಮಲ ಎಂಬವರ ಮನೆಯು ಭಾಗಶ: ಹಾನಿಯಾಗಿದ್ದು,ಪಂಜಿಕಲ್ಲುಗ್ರಾಮದ ಬೋಜಪೂಜಾರಿ,ಜಯ ಎಂಬವರ ಮನೆಗೂ ಹಾನಿವುಂಟಾಗಿದೆ.ಹಾಗೆಯೇ ಕಾರಿಂಜಕ್ರಾಸ್ ಬಳಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಿದ್ದು ನಷ್ಟವುಂಟಾಗಿದೆ.ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಬಗ್ಗೆ ಅಂದಾಜಿಸಿದ್ದಾರೆ. 
