ಬಂಟ್ವಾಳ : ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಬಾಲ್ಯದಲ್ಲಿ ಓಡಾಡಿದ ಜೈನರಪೇಟೆ ಮತ್ತು ಕೆಳಗಿನಪೇಟೆಯ ಮಧ್ಯಯಯ ಅವರ ಹಳೇ ನಿವಾಸದ ಪಕ್ಕದಲ್ಲಿ ನೂತನವಾಗಿ ಸುಮಾರು 2 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಬಂಟ್ವಾಳ ತಾಲೂಕು ಘಟಕದ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಯೋಜನಾ ಕಛೇರಿ  “ಉನ್ನತಿ ಸೌಧ”ದ ಲೋಕಾರ್ಪಣೆ ಬುಧವಾರ ನಡೆಯಿತು. IMG-20200610-WA0036

ಬಂಟ್ವಾಳ  ಶಾಸಕರಾದ  ರಾಜೇಶ್ ನಾಯ್ಕ್ ಉಳ್ಳಿಪ್ಪಾಡಿಗುತ್ತು ಅವರು ದೀಪ ಬೆಳಗಿಸುವುದರ ಮೂಲಕ ಸೌಧವನ್ನು ಉದ್ಘಾಟಿಸಿ ಶುಭ ಹಾರೈಸಿದರು.ನಡೆದ ಸರಳ ಸಮಾರಂಭದಲ್ಲಿ  ಮಾಜಿ ಸಚಿವರಾದ ರಮಾನಾಥ ರೈ, ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ಬಂಟ್ವಾಳ ತಾಲೂಕು ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಬಾಲಕೃಷ್ಣ ಆಳ್ವ,ಬಂಟ್ವಾಳ ತಾಲೂಕು ಒಕ್ಕೂಟದ ಅಧ್ಯಕ್ಷ ಮಾಧವ ವಳವೂರು,ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ಎ.ಸಿ.ಭಂಡಾರಿ, ರೋಟರಿ ಕ್ಲಬ್ 3181ರ ನಿಯೋಜಿತ ರಾಜ್ಯಪಾಲ  ಪ್ರಕಾಶ್ ಕಾರಂತ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ  ದೇವದಾಸ ಶೆಟ್ಟಿ,  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಾಹಕ ನಿರ್ದೇಶಕರಾದ  ಡಾ.ಎಲ್.ಹೆಚ್ ಮಂಜುನಾಥ್ ಅತಿಥಿಗಳಾಗಿ ಭಾಗವಹಿಸಿದ್ದರು.

ಪ್ರಾದೇಶಿಕ ನಿರ್ದೇಶಕರಾದ  ವಸಂತ ಸಾಲ್ಯಾನ್, ಕೇಂದ್ರ ಕಛೇರಿಯ ಸ್ಟೇಶನರಿ ವಿಭಾಗದ ನಿರ್ದೇಶಕರಾದ  ಚಂದ್ರಶೇಖರ್ ನೆಲ್ಯಾಡಿ,ಕೇಂದ್ರ ಹಣಕಾಸು ಪ್ರಾದೇಶಿಕ ನಿರ್ದೇಶಕರಾದ  ಶಾಂತಾರಾಮ ಪೈ, ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ,  ಜಿಲ್ಲಾ ಎಂಐಎಸ್ ಯೋಜನಾಧಿಕಾರಿ  ಮಹಂತೇಶ್, ಬಂಟ್ವಾಳ ತಾಲೂಕಿನ ಒಕ್ಕೂಟಗಳ ವಲಯಾಧ್ಯಕ್ಷರುಗಳು ಹಾಗೂ ಯೋಜನೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.ಬಂಟ್ವಾಳ ತಾಲೂಕು ಯೋಜನಾಧಿಕಾರಿ  ಜಯಾನಂದ.ಪಿ,ಸ್ವಾಗತಿಸಿ,ವಂದಿಸಿದರು. 2004 ರಲ್ಲಿ ಶ್ರೀ.ಕ್ಷೇ.ಗ್ರಾ.ಯೋ.ಯ ಬಂಟ್ವಾಳ ತಾಲೂಕು ಘಟಕ ಆರಂಭಗೊಂಡಿತ್ತು.ಇದೀಗ 4,170 ಪ್ರಗತಿಬಂಧು ಸ್ವಸಹಾಯಗಳ ಮೂಲಕ 35,450 ಕ್ಕು ಮಿಕ್ಕಿಸದಸ್ಯರನ್ನು ಹೊಂದಿದೆ.

By suddi9

Leave a Reply

Your email address will not be published. Required fields are marked *