ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳ ಇದರ ವಿವಿಧ ಸೇವಾ ಕಾರ್ಯಗಳ ಸಮರ್ಪಣ ಕಾರ್ಯಕ್ರಮ ಬುಧವಾರ ನಡೆಯಿತು. ಲಯನ್ಸ್ ಜಿಲ್ಲಾ ಗವರ್ನರ್ ರೋನಾಲ್ಡ್ ಐಸಕ್ ಗೋಮ್ಸ್ ಅವರು ಈ ಎಲ್ಲಾ ಸೇವಾ ಕಾರ್ಯಕ್ರಮಗಳನ್ನು ಲೋಕಾರ್ಪಣೆಗೊಳಿಸಿದರು.IMG-20200610-WA0062
ಬಿ. ಮೂಡ ಗ್ರಾಮದ ಕಾಮಾಜೆ ಎಂಬಲ್ಲಿ ಕಳೆದ ಹಲವು ವರ್ಷಗಳಿಂದ ಮುರಕಲು ಮನೆಯಲ್ಲಿ  ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ ಬಡ ಮಹಿಳೆಗೆ ಬಂಟ್ವಾಳ ಲಯನ್ಸ್ ಕ್ಲಬ್ ಹೊಸ ಮನೆ ನಿರ್ಮಿಸಿ ಕೊಟ್ಟಿದ್ದು ಲಯನ್ಸ್ ಗವರ್ನರ್ ಉದ್ಘಾಟಿಸಿ, ಮನೆ ಹಸ್ತಾಂತರಿಸಿ ಶುಭ ಹಾರೈಸಿದರು.  ಮೆಲ್ಕಾರ್ ಸಮೀಪದ ರಂಗೇಲು ಅಂಗನವಾಡಿ ಕೇಂದ್ರಕ್ಕೆ ಶೌಚಾಲಯ ಹಾಗೂ ಸಜೀಪಮೂಡ ಗ್ರಾಮದ ಕಂದೂರು ಎಂಬಲ್ಲಿ ಕುಲಾಲ ಯುವ ವೇದಿಕೆ ವತಿಯಿಂದ ಬಡ ಕುಟುಂಬಕ್ಕೆ ಪುನರ್ ನಿರ್ಮಾಣಗೊಳ್ಳುತ್ತಿರುವ ಮನೆಗೆ ಬಂಟ್ವಾಳ  ಲಯನ್ಸ್  ಕ್ಲಬ್ ವತಿಯಿಂದ ಶೌಚಾಲಯ ನಿರ್ಮಿಸಲಾಗಿದ್ದು ಜಿಲ್ಲಾ ಗವರ್ನರ್ ಅವರ ಮೂಲಕ ಹಸ್ತಾಂತರಿಸಲಾಯಿತು.
ಬಂಟ್ವಾಳ ಲಯನ್ಸ್ ಸೇವಾ ಟ್ರಸ್ಟ್ ಮೂಲಕ ನಡೆಯುತ್ತಿರುವ ನಿರ್ಮಲ ಹೃದಯ ವಿಶೇಷ ಚೇತನ ಮಕ್ಕಳ ಪಾಲನಾ ಕೇಂದ್ರದ ಮಕ್ಕಳ ಕಲಿಕೆಗೆ ಪೂರಕವಾಗುವ ನಿಟ್ಟಿನಲ್ಲಿ ಲಯನ್ಸ್ ಸದಸ್ಯರೊಬ್ಬರು ಕೊಡುಗೆಯಾಗಿ ನೀಡಿದ ಬೆಂಚು, ಕುರ್ಚಿ, ವಾಕರ್ ಮೊದಲಾದ ಪೀಟೋಪಕರಣಗಳನ್ನು ಹಸ್ತಾಂತರಿಸಲಾಯಿತು. ಎರಡು ಶಾಲೆಗಳಿಗೆ ಶುದ್ದ ಕುಡಿಯುವ ನೀರಿನ ಯಂತ್ರವನ್ನು ಹಸ್ತಾಂತರಿಸಲಾಯಿತು.
ಬಳಿಕ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕರೋನಾ ವಾರಿಯರ್ಸ್‌ಗಳಾಗಿ ಕರ್ತವ್ಯ ನಿರ್ವಹಿಸಿದ ಬಂಟ್ವಾಳ ನಗರ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿಯರು ಹಾಗೂ ಆಶಾಕಾರ್ಯಕರ್ತೆಯರನ್ನು ಗೌರವಿಸಿ, ಸನ್ಮಾನಿಸಲಾಯಿತು. ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ದರು. ಜಿಲ್ಲಾ ಗವರ್ನರ್ ರೋನಾಲ್ಡ್ ಐಸಕ್ ಗೋಮ್ಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕರೋನಾ ನಿಯಂತ್ರಣಕ್ಕೆ ತರುವಲ್ಲಿ ಆಶಾಕಾರ್ಯಕರ್ತೆಯರ ಕಾರ್ಯ ಸ್ಮರಣೀಯ. ಕೆಲವೆಡೆ ಪ್ರತಿರೋಧದ ನಡುವೆಯೂ ಆಶಾಕಾರ್ಯಕರ್ತೆಯರು ನಿರ್ಭೀತಿಯಿಂದ ಕೆಲಸ ಮಾಡಿದ್ದಾರೆ ಎಂದರು.
ಈ ಸಂದರ್ಭ ಲಯನ್ಸ್ ಜಿಲ್ಲಾ ಪ್ರಥಮ ಮಹಿಳೆ ಅನಿತಾ ಗೋಮ್ಸ್, ಸಂಪುಟ ಕಾರ್ಯದರ್ಶಿ ವಿಜಯ ವಿಷ್ಣು ಮಯ್ಯ, ಸಂಪುಟ ಕೋಶಾಧಿಕಾರಿ ಹರೀಶ್ ಶೆಟ್ಟಿ, ಪ್ರಾಂತೀಯ ಅಧ್ಯಕ್ಷ ರಾಧಕೃಷ್ಣ ರೈ, ಪ್ರಥಮ ಉಪ ಗವರ್ನರ್ ವಸಂತ ಶೆಟ್ಟಿ, ಶಿವಾನಂದ ಬಾಳಿಗ, ಸುಧಾಕರ ಆಚಾರ್ಯ, ರಾಧಕೃಷ್ಣ ಬಂಟ್ವಾಳ, ಡಾ. ವಸಂತ ಬಾಳಿಗ, ದಾಮೋದರ ಬಿ.ಎಂ., ದೇವಿಕಾ ದಾಮೋದರ್ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *