ಮಂಗಳೂರು: ಬಹುನಿರೀಕ್ಷಿತ `ಚಾಲಿಪೋಲಿಲು’ ತುಳುಚಿತ್ರದ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಪತ್ರಿಕಾಭವನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ನೆರವೇರಿಸಿದರು. ಕನ್ನಡದ ಪ್ರಸಿದ್ಧ ಪ್ರತಿಭಾಮಣಿಗಳನ್ನು ಹಾಕಿ ನಿಮರ್ಿಸಿದ ಈ ಚಿತ್ರ ತುಳು ಚಿತ್ರರಂಗಕ್ಕೆ ಹೊಸ ಆಯಾಮವನ್ನು ಕೊಡಲಿದೆ. ವಿಶೇಷ ತಂತ್ರಜ್ಞಾನ ಬಳಸಿ ಉತ್ತಮ ಕಥಾಧಾರಿತ, ತುಳು ಸಾಮಾಜಿಕ ಕಥೆಯ ಹಂದರವುಳ್ಳ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದ್ದು, ಭಾರೀ ಭರವಸೆ ಮೂಡಿಸಿದೆ. ಈ ಚಿತ್ರದ ಹಾಡುಗಳು ಸೊಗಸಾಗಿ ಮೂಡಿಬಂದಿದೆ. ಗೋಷ್ಠಿಯಲ್ಲಿ ನವೀನ್ ಡಿ ಪಡೀಲ್, ಭೋಜರಾಜ ವಾಮಂಜೂರು, ದೇವ್ದಾಸ್ ಕಾಪಿಕಾಡ್ ಮುಂತಾದವರು ಉಪಸ್ಥಿತರಿದ್ದರು.

