ಮಂಗಳೂರು: ನಗರದ ಶಕ್ತಿನಗರ ಸಮೀಪದ ವೈದ್ಯನಾಥ ದೈವಸ್ಥಾನ ಸಮೀಪದ ಜೋಕುಲ್ಸಾನಾ ಎಂಬಲ್ಲಿ ವ್ಯಕ್ತಿಯೊಬ್ಬನನ್ನು ಮಚ್ಚಿನಿಂದ ಯದ್ವಾತದ್ವ ಕೊಚ್ಚಿಕೊಲೆ ಮಾಡಲಾಗಿದೆ. ಮಚ್ಚನೇಟನ್ನು ಗಮನಿಸಿದಾ ಇದು ಗಾಂಜಾ ವಾರ್ ನಿಂದ ಆದ ಕೊಲೆ ಇರಬಹುದೆಂಬ ಶಂಕೆ ದಟ್ಟವಾಗಿದೆ.
ಬಂದರು ಅನ್ಸಾರ್ ರಸ್ತೆಯ ನಿವಾಸಿ ಅಬ್ದುಲ್ ಹಮೀದ್(47) ಕೊಲೆಗೀಡಾದ ದುರ್ದೈವಿ.
ಮಗಳೂರಿನಿಂದ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವ್ಯಕ್ತಿಯೊಬ್ಬರಿಗೆ ವೈದ್ಯನಾಥ ದೈವಸ್ಥಾನದ ಸಮೀಪ ರಕ್ತದ ಕಲೆಗಳು ಕಂಡುಬಂದವು. ಗಾಬರಿಯಿಂದು ನೋಡಿದರೆ ವ್ಯಕ್ತಿಯೊಬ್ಬನನ್ನು ಮಚ್ಚನಿಂದ ಕೊಚ್ಚಿ ಭೀಬತ್ಸವಾಗಿ ಕೊಲೆ ಮಾಡಲಾಗಿದೆ.

ತಕ್ಷಣ ಸುದ್ದಿ ಮುಟ್ಟಿಸಿ ಕಂಕನಾಡಿ ಪೊಲೀಸರಿಗೆ ಮಾಹಿತಿ ಒದಗಿಸಲಾಯ್ತು. ಘಟನಾ ಸ್ಥಳಕ್ಕೆ ಕುದ್ದ ಜಿಲ್ಲಾ ಕಮಿಷನರ್ ಹಿತೇಂದ್ರ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆರಮಭದಲ್ಲಿ ಇದು ಯಾರ ಶವ ಎಂದು ಗುರುತಿಸಲು ಕಷ್ಟವಾಗಿತ್ತು. ಕೊಲೆಗೀಡಾದ ವ್ಯಕ್ತಿಯ ಕಿಸೆಯಲ್ಲಿ ಯಾವುದೇ ವಸ್ತುಗಳು ದೊರಕದ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿಯ ಕೊಲೆ ಎಂದೇ ಪ್ರಕರಣ ದಾಖಲಿಸಲಾಗಿತ್ತು.
ಈ ಸ್ಥಳದಲ್ಲಿ ಹಿಂದಿನಿಂದಲೂ ಬೇರೆ ಬೇರೆ ವಿಷಯಕ್ಕೆ ಹೊಡೆದಾಟ ಸಂಭವಿಸುತ್ತಿತ್ತು. ಗಾಂಜಾವಾರ್ಗಳ ಬಗ್ಗೆಯೂ ಜಗಳ ಕಾಯುತ್ತಿದ್ದರು ಎಂದು ತಿಳಿದುಬಂದಿದೆ. ಮಂಗಳೂರಿನ ನಿವಾಸಿ ರಾತ್ರಿಯ ವೇಳೆ ಈ ಸ್ಥಳಕ್ಕೆ ಬಂದು ಯಾಕೆ ಕೊಲೆಯಾಗಿರುವುದನ್ನು ನೋಡಿದರೆ ಕೆಲವೊಂದು ಅನುಮಾನಗಳು ಹುಟ್ಟಿಕೊಳ್ಳುವುದು ಸಹಜ ಎಂದು ಸ್ಥಳೀಯರು ಮಾತಾಡಿಕೊಳ್ಳುತ್ತಿದ್ದಾರೆ. ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



