ಬಂಟ್ವಾಳ: ಅಧಿಕಾರಿಗಳು ಉದಾಸೀನ ಪ್ರವೃತಿ ಬಿಟ್ಟು,ಮನಪೂರ್ವಕವಾಗಿ ಕಾರ್ಯ ನಿರ್ವಹಿಸಿದರೆ ಯಾವುದೇ ಸಮಸ್ಯೆ ಎದುರಾಗದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಹೇಳಿದ್ದಾರೆ.ಬಂಟ್ವಾಳ ತಾಪಂನ ಎಸ್ ಜಿಎಸ್ ವೈ ಸಭಾಂಗಣದಲ್ಲಿ ಶುಕ್ರವಾರ ತಾಲೂಕಿನ 10 ಗ್ರಾಪಂಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಡುವ ಸಿಬ್ಬಂದಿಗಳಿಗೆ ಶಕ್ತಿಸಾಧನ ಹಾಗೂ ತಾಪಂನಿಂದ ಕಿಟ್ ವಿತರಿಸಿ ಅವರು ಮಾತನಾಡುತ್ತಿದ್ದರು.

IMG-20200605-WA0033ತಾಲೂಕಿನ 58 ಗ್ರಾಪಂ ಗಳ ಪೈಕಿ ಕೇವಲ 10 ಗ್ರಾಪಂಗಳಲ್ಲಿ ಮಾತ್ರ ಪೂರ್ಣ ಪ್ರಮಾಣದ ಘನತ್ಯಾಜ್ಯ ನಿರ್ವ ಹಣಾ ಘಟಕ ನಿರ್ಮಾಣವಾಗಿದ್ದು,ಮುಂದಿನ ದಿನದಲ್ಲಿ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿಯು ಘನತ್ಯಾಜ್ಯ ನಿರ್ವಹಣೆಗೆ ಕ್ರಮಕೈಗೊಳ್ಳುವಂತೆ ಶಾಸಕರು ಸೂಚಿಸಿದರು.

IMG-20200605-WA0036ಗ್ರಾಪಂ.ಮಟ್ಟದಲ್ಲಿ ಈಗಾಗಲೇ ರಚಿಸಲಾದ ಟಾಸ್ಕ್ ಪೋಸ್೯ ಸಮಿತಿಯನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಿ,ಕೊರೋನ ಸಂಬಂಧಿಸಿ ಹೆಚ್ಚಿನ ಶ್ರಮ ವಹಿಸಬೇಕು,ಹೊರರಾಜ್ಯದಿಂದ ಬರುವ ವ್ಯಕ್ತಿಗಳಿಗೆ ಕ್ವಾರಂಟೈನ್ ವ್ಯವಸ್ಥೆಯನ್ನು ಪೂರೈಸುವ ನಿಟ್ಟಿನಲ್ಲಿ ಟಾಸ್ಕ್ ಪೋಸ್೯ ಸಮಿತಿ ಸಿದ್ದವಾಗಿರುವಂತೆ ಶಾಸಕರು ಸೂಚಿಸಿದರು. ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇ ರ,ಉಪಾಧ್ಯಕ್ಷ ಅಬ್ಬಾಸ್ ಆಲಿ,ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ,ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ,ಸಹಾಯಕ ಕಾರ್ಯ ನಿರ್ವಾಹಕಾಧಿಕಾರಿ ತಾರನಾಥ ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *