ಉಡುಪಿ : “ಜನ ಸೇವೆಯೇ ಜನಾರ್ದನ ಸೇವೆ”ಎಂಬ ಉದ್ದೇಶದಿಂದ, ಬಡವರಿಂದ… ಬಡವರಿಗಾಗಿ..ಬಡವರಿಗೋಸ್ಕರ. ಎಂಬ ಪರಿಕಲ್ಪನೆಯೊಂದಿಗೆ ಕರೋನಾ ಲಾಕ್ ಡೌನ್ ನಿಂದಾಗಿ ಉದ್ಯೋಗ ಇಲ್ಲದೆ ಬಡತನದಿಂದ ಊಟಕ್ಕೂ ಪರದಾಡುವ ಸ್ಥಿತಿ ಈ ಜನರಿಗೆ ಎದುರಾಗಿತ್ತು ಇದು ದ.ಕ ಜಿಲ್ಲೆಯ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಪಂಬತ್ತಜೆ, ಪೆರ್ನಮೊಗರು ,ಸಾಯ, ಪಾಲಿಕೆ, ಕಂದೇಲ್, ಘೋರಗುರಿ, ಮಾಂಬಾಡಿ, ಬೇಡಗುಡ್ಡೆ, ಸಾಯ ಪರಿಸರದಲ್ಲಿನ 45 ಕುಟು೦ಬಗಳ 250 ಕ್ಕೂ ಹೆಚ್ಚು ಜನರು ಬಹಳಷ್ಟು ಕಷ್ಟದಲ್ಲಿದ್ದರು.
ಈ ಬಗ್ಗೆ ಅವರು ಸಹಾಯಕ್ಕಾಗಿ ಅಡಿಯೋ ಮಾಡಿ ಕಳುಹಿಸಿದ್ದರು ಈ ನಿಟ್ಟಿನಲ್ಲಿ ಉಡುಪಿ ಕೊರೋನಾ ವಾರಿಯರ್ಸ್ ತಂಡ 3 ದಿನದ ಒಳಗೆ ರೂ 25 ಸಾವಿರ ರೂ ಮೌಲ್ಯದ ಜಿನಸಿ ವಸ್ತುಗಳು, ಅಕ್ಕಿಯನ್ನು ಸಂಗ್ರಹಿಸಿ ಸುಮಾರು 220 ಕಿ.ಮೀ ದೂರ ಕ್ರಮಿಸಿ ಕೇರಳ ಗಡಿ ಭಾಗದ ಭಾಗಕ್ಕೆ ತೆರಳಿ ನೀಡಿದ್ದು ಜನ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಂದಭ೯ದಲ್ಲಿ ದೀಪಕ್ ಶೆಣ್ಣಿ, ಹಿರಿಯರಾದ ಗೋಪಾಲಕೃಷ್ಣ ಪ್ರಭು, ರಾಘವೇoದ್ರ ಪ್ರಭು, ಕವಾ೯ಲು ಉಪಸ್ಥಿತರಿದ್ದರು.ರೋಶನ್ ಸಹಕರಿಸಿದರು.

