ಬಂಟ್ವಾಳ: ಭರದಿಂದ ಸಾಗುತ್ತಿರುವ ಬಿ.ಸಿ.ರೋಡ್-ಪುಂಜಾಲಕಟ್ಟೆ ಯವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಪ್ರಗತಿಯನ್ನು ಸಂಸದ ನಳಿನ್ ಕುಮಾರ್ ಕಟೀಲ್‌,ಶಾಸಕ ರಾಜೇಶ್ ನಾಯ್ಕ್ ಶನಿವಾರ ಸಂಜೆ ಪರಿಶೀಲಿಸಿದರು.IMG-20200523-WA0078

ಮಯ್ಯರಬೈಲು,ಭಂಡಾರಿಬೆಟ್ಟು,ಬೈಪಾಸ್ ಬಳಿ ಚರಂಡಿ ನಿರ್ಮಾಣ ಸಹಿತ ರಸ್ತೆ ಕಾಮಗಾರಿಯನ್ನು ಸಂಸದರು ಹಾಗೂ ಶಾಸಕರು ಜಂಟಿಯಾಗಿ ವೀಕ್ಷಿಸಿದರು. ಈ ಸಂದರ್ಭ  ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಸಂಸದರಿಗೆ ಪೂರಕ ಮಾಹಿತಿಯನ್ನು ನೀಡಿದರು. ಗುಣಮಟ್ಟದೊಂದಿಗೆ ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಸಂಸದ ನಳಿನ್ ಕುಮಾರ್ ಅವರು ಹೆದ್ದಾರಿ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು. IMG-20200523-WA0075

ಹೈವೆ ಇಂಜಿನಿಯರ್ ರಮೇಶ್,  ಮುಗ್ರೋಡಿಕನ್ಸ್ಟ್ರೆಕ್ಷನ್   ಸುಧಾಕರ ಶೆಟ್ಚಿ, ಬಂಟ್ವಾಳ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ  ದೇವದಾಸ್ ಶೆಟ್ಟಿ, ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ,ಸ್ಥಳೀಯ ಪುರಸಭಾ ಸದಸ್ಯ ಹರಿಪ್ರಸಾದ್ , ಬಿಜೆಪಿ ಮುಖಂಡರಾದ ನಿತಿನ್ ಕುಮಾರ್, ರಮಾನಾಥ ರಾಯಿ, ಧನಂಜಯ ಶೆಟ್ಟಿ, ಪುರುಷೋತ್ತಮ ಶೆಟ್ಟಿ ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *