ಬಂಟ್ವಾಳ: ತಾಲೂಕಿನ ಸಜಿಪನಡು ಗ್ರಾಮದ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಗರ್ಭಗುಡಿಗೆ  ಬ್ರಹ್ಮಶ್ರೀ ಆದಿ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು. ಮಾಗಣೆ ತಂತ್ರಿ ಎನ್ ಸುಬ್ರಹ್ಮಣ್ಯ ಭಟ್ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

IMG-20200519-WA0029ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ಶಿಲಾಮಯ ಗರ್ಭಗುಡಿ ತೀರ್ಥ ಮಂಟಪ ಸುತ್ತು ಗೋಪುರ ನಿರ್ಮಾಣಗೊಳ್ಳಲಿದೆ.  ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖವಾಗಿ ಎಂ ವೆಂಕಟೇಶ್ವರ ಭಟ್, ಕೆ ರಾಧಾಕೃಷ್ಣ ಆಳ್ವ, ಯತೀಶ್ ಭಂಡಾರಿ, ರಾಮಕೃಷ್ಣ ಭಟ್, ಯಶೋಧರ, ಪ್ರದೀಪ್ ಶೆಟ್ಟಿ, ನಿತಿನ್ ಅರಸ, ಸುರೇಶ್ ಬಂಗೇರ, ಲಿಂಗಪ್ಪ ದೋಟ, ಪದ್ಮನಾಭ ಭಟ್ ಮೊದಲಾದವರು ಉಪಸ್ಥಿತರಿದ್ದರು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಾರ್ಯಕ್ರಮವನ್ನು ಸರಳವಾಗಿ ನಡೆಸಲಾಯಿತು.

By suddi9

Leave a Reply

Your email address will not be published. Required fields are marked *