ಬಂಟ್ವಾಳ: ಕೋವಿಡ್ ನಿಂದ ಆಸ್ಪತ್ರೆಗೆ ದಾಖಲಾಗಿದ್ದ ಮತ್ತೋರ್ವ ಬಂಟ್ವಾಳ ಕಸಬಾ ನಿವಾಸಿ ಗುಣಮುಖರಾಗಿ ಮನೆಗೆ ಅಗಮಿಸಿದ್ದು,ಬಂಟ್ವಾಳದ ನಾಗರಿಕರು ಕೊಂಚ ನಿರಾಳರಾಗಿದ್ದಾರೆ. ೬೯ ವರ್ಷದ ಇವರಿಗೆ ಮೇ ೧ರಂದು ಪಾಸಿಟಿವ್ ಎಂದು ದಾಖಲಿಸಲಾಗಿತ್ತು. ೧೪ ಮತ್ತು ೧೬ರಂದು ಗಂಟಲು ದ್ರವ ಮಾದರಿ ನೆಗೆಟಿವ್ ಬಂದ ಕಾರಣ ಅವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬಂಟ್ವಾಳ ಪೇಟೆಯ ಶಾಲಾ ರಸ್ತೆಯಲ್ಲಿರುವ ಒಂದೇ ಮನೆಯ ನಾಲ್ವರಿಗೆ ಪಾಸಿಟಿವ್ ಪ್ರಕರಣ ದಾಖಲಾಗಿತ್ತು. ಅವರಲ್ಲಿ ಒಬ್ಬರು ಬಿಡುಗಡೆ ಹೊಂದಿದ್ದಾರೆ. ಇನ್ನು ಒಂದೇ ಮನೆಯ ಮೂವರು ಹಾಗೂ 16 ರ ಹರೆಯದ ಬಾಲಕಿ ಸಹಿತ ೫ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಟ್ವಾಳ ತಾಲೂಕಿನ ಒಟ್ಟು ಪಾಸಿಟಿವ್ ಪ್ರಕರಣಗಳು ಹೀಗಿವೆ: ಒಟ್ಟು ಪ್ರಕರಣಗಳು: ೧೨ ಮೃತಪಟ್ಟವರು: ೩ ಗುಣಮುಖರಾದವರು: ೪ ಚಿಕಿತ್ಸೆ ಪಡೆಯುತ್ತಿರುವವರು: ೫ ,ಸದ್ಯ ಬಂಟ್ವಾಳ ರಥ ಬೀದಿ ಸೀಲ್ ಡೌನ್ ಮುಂದುವರಿದೆ.

By suddi9

Leave a Reply

Your email address will not be published. Required fields are marked *