ಬಂಟ್ವಾಳ : ಕೋವಿಡ್19 ವಿರುದ್ದ ಸಂಘಟಿತರಾಗಿ ತಾಲೂಕಿನ ಎಲ್ಲಾ ಇಲಾಖೆಗಳು ಕೆಲಸ ಮಾಡಬೇಕೆಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸೂಚಿಸಿದ್ದಾರೆ. ಬಂಟವಾಳ ಬಂಟರ ಭವನದಲ್ಲಿ ಶುಕ್ರವಾರ  ನಡೆದ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಗ್ರಾಮ ಪಂಚಾಯತ್ ಅಭಿವೃದ್ಧಿ  ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು ಯಾವುದೇ ಸಂದರ್ಭದಲ್ಲಿ ಯೂ ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರದೆ ಸಮಸ್ಯೆ ಗಳಿಗೆ ಸ್ಫಂದಿಸುವ ಕಾರ್ಯ ನಡೆಸಬೇಕು ಎಂದರು.IMG-20200515-WA0072

ಬೇರೆ ರಾಜ್ಯದಿಂದ ಬರುವ ವ್ಯಕ್ತಿಗಳಿಗೆ ಪ್ರಥಮ ಹಂತದ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಅಯಾಯ ಗ್ರಾಮ ಪಂಚಾಯತ್ ಮಟ್ಟದಲ್ಲಿ ವ್ಯವಸ್ಥೆ ಮಾಡಲಾಗಿದ್ದು ಇದರ ಸಂಪೂರ್ಣ ಮೇಲುಸ್ತುವಾರಿಯನ್ನು  ಪಂಚಾಯತ್  ಪಿ.ಡಿ.ಒಗಳು ವಹಿಸಬೇಕು ಎಂದು ಅವರು ತಿಳಿಸಿದರು. ಈ ಸಂದರ್ಭ ಹಾಜರಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ಅವರು ಮಾತನಾಡಿ,ಹೊರರಾಜ್ಯಗಳಿಂದ ಬಂದವರು ಗ್ರಾಮದಲ್ಲಿ ಎಲ್ಲು ಇಳಿದುಕೊಳ್ಳದೆ ನೇರವಾಗಿ ಸೂಚಿಸಿದ ಜಾಗಗಳಿಗೆ ತಲುಪಬೇಕು ಎಂದರು.

ತಹಶೀಲ್ದಾರ್ ಎಸ್.ಆರ್.ರಶ್ಮೀ,ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರು ಸಲಹೆ,ಸೂಚನೆಗಳನ್ನಿತ್ತರು. ಮೊದಲ ಹಂತದಲ್ಲಿ ಹೊರರಾಜ್ಯದಿಂದ ಬಂದವರಿಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು,ಎರಡನೇ ಹಂತದ ಸಿದ್ದತೆ ಆಗಬೇಕಾಗಿದೆ ಎಂದು ಸೂಚಿಸಲಾಯಿತು.ತಾಲೂಕಿನ ವಿವಿಧ ಗ್ರಾಪಂ ನ ಪಿಡಿಒಗಳು ಸಭೆಯಲ್ಲಿ ಹಾಜರಿದ್ದರು.

By suddi9

Leave a Reply

Your email address will not be published. Required fields are marked *