ಕೋಲಾರ : ಕೋಲಾರ ಜಿಲ್ಲೆಯಲ್ಲಿ ಲಾಕ್‍ಡೌನ್ ಅವಧಿಯನ್ನು ವಿಸ್ತರಿಸುವ ಕುರಿತು. ಕೋವಿಡ್-19 ಸೋಂಕು ಹರಡಿರುವ ಹೊಸಕೋಟೆಯ ಆಸ್ಪತ್ರೆಗಳ ತ್ಯಾಜ್ಯವನ್ನು ಕೆ.ಸಿ. ವ್ಯಾಲಿ ಪಕ್ಕದಲ್ಲಿ ಹಾಕುವುದನ್ನು ಕೂಡಲೇ ನಿಲ್ಲಿಸಲು ಕೋರಿ ನೀರಾವರಿ ಹೋರಾಟ ಸಮಿತಿ ಹಾಗೂ ಕನ್ನಡ ರೈತ, ಅಹಿಂದ ವೇದಿಕೆ ಮತ್ತು ಪ್ರಗತಿಪರ ಸಂಘಟನೆಳು ಮನವಿ ಮಾಡಿದರು.kurubarpet venkatesh1

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಹಾಮಾರಿ ಕೋವಿಡ್-19 ಪ್ರಪಂಚವನ್ನೇ ಕಾಡುತ್ತಿದೆ. ಆದರೆ, ಸದ್ಯಕ್ಕೆ ಕೋಲಾರ ಜಿಲ್ಲೆಯಲ್ಲಿ ಯಾವುದೇ ಸೋಂಕು ಹರಡದಿರುವುದು ಸಂತೋಷದ ವಿಷಯ. ಈ ವಿಚಾರವಾಗಿ ಜಿಲ್ಲಾಡಳಿತ ತಮ್ಮ ಕರ್ತವ್ಯವನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದೆ. ಅವರಿಗೆ ಪ್ರಗತಿಪರ ಸಂಘನಟನೆಗಳ ವತಿಯಿಂದ ಅಭಿನಂದನೆಗಳು.kurubarpet venkatesh

ಈ ನಿಟ್ಟಿನಲ್ಲಿ ಕೋಲಾರ ಜಿಲ್ಲೆಯು ಗಡಿ ಪ್ರದೇಶಕ್ಕೆ ಅಂಟಿಕೊಂಡಿದ್ದು, ಪಕ್ಕದ ಜಿಲ್ಲೆಗಳಲ್ಲಿಗಳಾದ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಜಿಲ್ಲೆ ಗಡಿ ಭಾಗಗಳಾದ ಆಂಧ್ರ, ತಮಿಳುನಾಡು ರಾಜ್ಯಗಳಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡಿದ್ದು, ಮೇ 3ರ ನಂತರ ಲಾಕ್‍ಡೌನ್ ಸಡಿಲಿಕೆ ಮಾಡಿದರೆ ಬೇರೆ ಜಿಲ್ಲೆಯವರು ನಮ್ಮ ಜಿಲ್ಲೆಗೆ ಸಂಚರಿಸಿ, ನಮ್ಮವರು ಬೇರೆ ಜಿಲ್ಲೆಗೆ ಹೋಗಿ ಬಂದರೆ ನಮ್ಮ ಕೋಲಾರ ಗ್ರೀನ್ ಜೋನ್ ರೆಡ್ ಜೋನ್ ಆಗುವುದರಲ್ಲಿ ಯಾವುದೇ ಸಂಶವೇ ಇಲ್ಲ. ಹಾಗಾಗಿ ಈ ಲಾಕ್‍ಡೌನ್ ಅನ್ನು ಇನ್ನೂ ಒಂದು ತಿಂಗಳ ಕಾಲ ಮುಂದುವರೆಸಿ ಜಿಲ್ಲೆಯಲ್ಲಿ ಕೋವಿಡ್ -19 ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ತಮ್ಮಲ್ಲಿ ಕೋರುತ್ತೇವೆ.

ಇದೇ ಸಂಬಂಧ ಕೋಲಾರ ತಾಲ್ಲೂಕು ಲಕ್ಷ್ಮೀಸಾಗರ ಕೆ.ಸಿ. ವ್ಯಾಲಿ ಹತ್ತಿರ ಕೋವಿಡ್-19 ಹರಡಿರುವ ಹೊಸಕೋಟೆ ನಗರಸಭೆಯ ಸುಮಾರು ಆಸ್ಪತ್ರೆ ಹಾಗೂ ನಗರದ ತಾಜ್ಯವನ್ನು ತಂದು ಅಕ್ರಮವಾಗಿ ನಡೆದಿರುವ ಕಲ್ಲುಕೋರಿಗಳಲ್ಲಿ ನಿರಂತರವಾಗಿ ಸುರಿಯುತ್ತಿದ್ದಾರೆ. ಇದರಿಂದ ಈ ತಾಜ್ಯವು ಕೆ.ಸಿ. ವ್ಯಾಲಿ ನೀರಿನೊಂದಿಗೆ ಬೆರೆತು ಜಿಲ್ಲೆಯ ಕೆರೆಗಳಿಗೆ ಹರಿಯುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗವು ಹರಡಲಿದ್ದು, ಕೂಡಲೇ ಹೊಸಕೋಟೆಯ ನಗರಸಭೆಯ (ಆಸ್ಪತ್ರೆಗಳ) ತ್ಯಾಜ್ಯವನ್ನು ತಕ್ಷಣದಿಂದಲೇ ನಿಲ್ಲಿಸಬೇಕು. ಇಲ್ಲವಾದರೆ ಪ್ರಗತಿಪರ ಸಂಘಟನೆಗಳಿಂದ ಮುಂದಿನ ದಿನಗಳಲ್ಲಿ ನಿರಂತರ ದರಣಿಗಳನ್ನು ಹಮ್ಮಿಕೊಳ್ಳಲಾಗುವುದೆಂದು ಈ ಮೂಲಕ ತಿಳಿಸುತ್ತಿದ್ದೇವೆ.

ಈ ಸಂದರ್ಭದಲ್ಲಿ ಕುರುಬರಪೇಟೆ ವೆಂಕಟೇಶ್, ರಾಮುಶಿವಣ್ಣ, ಜಿ. ನಾರಾಯಣಸ್ವಾಮಿ, ಚೇತನ್ ಬಾಬು, ದಲಿತ್ ನಾರಾಯಣಸ್ವಾಮಿ, ವೆಂಕಟಕೃಷ್ಣ, ದಿಂಬಾ ನಾಗರಾಜ್, ಚಿನ್ನಿ ಶ್ರೀನಿವಾಸ್, ಚರ್ಚ್ ಚೇರ್ಮನ್ ಸುದೀರ್, ನಾರಾಯಣ ವಿಭೂ, ದೊಡ್ಡಕುರುಬರಹಳ್ಳಿ ಶಂಕರಪ್ಪ, ಮತ್ತಿಕುಂಟೆ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *