ಬಂಟ್ವಾಳ: ಕೋರೋನ ಸೋಂಕು ದೃಢಪಟ್ಟು ಕಂಟೈನ್ಮೆಂಟ್ ವಲಯವನ್ನಾಗಿ ಗುರುತಿಸಲಾದ ತಾಲೂಕಿನ ನರಿಕೊಂಬುಗ್ರಾಮದ ನಾಯಿಲ ಪ್ರದೇಶಕ್ಕೆ ಬಂಟ್ವಾಳ ತಾಪಂ ಇಒ,ಇನ್ಪಿಡೆಂಟ್ ಅಧಿಕಾರಿಯಾಗಿ ನಿಯುಕ್ತರಾದ ರಾಜಣ್ಣ ಅವರು ಸೋಮವಾರ ಸಂಜೆ ಭೇಟಿ ನೀಡಿ ಇಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಿದರು.21-07-37-EO+Naricombu+4

ಈ ಸಂದರ್ಭದಲ್ಲಿ  ಕಂಟೈನ್ಮೆಂಟ್ ವಲಯದಲ್ಲಿ ಅನಾರೋಗ್ಯಪೀಡಿತ 75 ರ ಹರೆಯದ ವೃದ್ದರೋರ್ವರ ಸಹಿತ 4 ವರ್ಷದ ಮಗುವನ್ನು ಬಂಟ್ವಾಳ ಆರೋಗ್ಯಾಧಿಕಾರಿಯವರನ್ನು ಸಂಪರ್ಕಿಸಿ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು. ಹಾಗೆಯೇ ಕಂಟೈನ್ಮಂಟ್ ವಲಯದ ನಾಗರಿಕರಿಗೆ ಅಗತ್ಯ ವಸ್ತು ಪೂರೈಸುವ ನಿಟ್ಟಿನಲ್ಲಿ ಪಂಚಾಯತ್ ನಲ್ಲಿ ತೆರೆಯಲಾದ ಸಹಾಯವಾಣಿಯನ್ನು ಪರಿಶೀಲಿಸಿದರು.  ಗ್ರಾಪಂ ಪಿಡಿಒ,ಪೊಲೀಸ್ ಅಧಿಕಾರಿಗಳು,ಆಶಾ ಕಾರ್ಯಕರ್ತೆಯರು,ಕೊರೋನ ವಾರಿಯಸ್೯ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *