ಉಡುಪಿ: ಕರೋನಾ ವಾರಿಯರ್ಸ ರೀತಿಯಲ್ಲಿ ಔಷಧ ಅಂಗಡಿಗಳು ಕೂಡ ಕಾರ್ಯನಿರ್ವಹಿಸುತ್ತಿವೆ.ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸುವ ಔಷಧ ಅಂಗಡಿ ಮೆಡಿಕಲ್ ಗಳು ಲಾಕ್ ಡೌನ್ ಪ್ರಾರಂಭವಾಗಿನಿಂದ ಇಲ್ಲಿಯವರೆಗೆ ಅತ್ಯುತ್ತಮವಾಗಿ ಜನರಿಗೆ ಸೇವೆ ಸಲ್ಲಿಸುತ್ತಿವೆ ಆದರೆ ಅವರಿಗೆ ಪಾಸು ಸೌಲಭ್ಯ ಸರಿಯಾಗಿ ಒದಗಿಸಲು ಜಿಲ್ಲಾ ಔಷಧ ನಿಯಂತ್ರಕರು ಉತ್ತಮವಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆದರೆ ವಾಹನ ನಿಯಮಗಳಿದ ಇವರಿಗೆ ತೊಂದರೆಯಾಗಿದೆ ದೂರದ ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ಔಷಧ ತರಲು ಆಗಮಿಸುವ ಸಂದರ್ಭದಲ್ಲಿ ಚೆಕ್ ಪೋಸ್ಟ್ ನಲ್ಲಿ ತೊಂದರೆಯಾಗುತ್ತಿದ್ದು ಈ ಬಗ್ಗೆ ಜಿಲ್ಲಾಧಿಕಾರಿಯವರು ಕ್ರಮ ಕೈಗೊಂಡು ಅವರಿಗೆ ಲಾಕ್ ಡೌನ್ ವಾಹನ ನಿಯಮಗಳನ್ನು ಸರಳಿಕರಣಗೊಳಿಸುವಂತೆ ವೈದ್ಯಕೀಯ ಪ್ರತಿನಿಧಿ ಸಂಘದ ಕಾರ್ಯದರ್ಶಿ ಪ್ರಸನ್ನ ಕಾರಂತ್ ಮತ್ತು ಸಲಹೆಗಾರ ಮಧುಸೂಧನ್ ಹೇರೂರು ಒತ್ತಾಯಿಸಿದ್ದಾರೆ.ಅಲ್ಲದೆ ಅವರನ್ನು ಕೊರೊನಾ ವಾರಿಯರ್ಸ ರೀತಿಯಲ್ಲಿ ಸೌಲಭ್ಯ ಒದಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *