ವಾಮಂಜೂರು: ಸಮಾಜದಆರ್ಥಿಕವಾಗಿ ಹಿಂದುಳಿದ ಹಾಗೂ ಗ್ರಾಮೀಣಯುವಜನರಿಗಾಗಿ ಪೂಜ್ಯಖಾವಂದರಆಶಯದಿಂದ ಸ್ಥಾಪಿತವಾಗಿರುವಎಸ್.ಡಿ.ಎಂ ಮಂಗಳಜ್ಯೋತಿ ಐ.ಟಿ.ಐಕೊರೊನಾ ಸಾಂಕ್ರಮಿಕರೋಗದ ವಿರುದ್ಧ ಹೋರಾಟದಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದೆ.
ಜಿಲ್ಲಾಡಳಿತವು ಹೊಲಿಗೆ ತರಬೇತಿ ಸಂಸ್ಥೆಗಳಿಗೆ ಒದಗಿಸಿದ ಬಟ್ಟೆ ಹಾಗೂ ಇತರ ಕಚ್ಚಾ ಸಾಮಾಗ್ರಿಗಳನ್ನು ಕಳೆದ 4 ದಿನಗಳ ಹಿಂದೆ ಆರಂಭಗೊಂಡ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕರು ಮಾಸ್ಕ್‍ಗಳನ್ನು ಹೊಲಿಯುವ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.
ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಬಳಸುವ ತ್ರಿ ಲೇಯರ್ ಮಾಸ್ಕ್ ಒಂದು ಗಂಟೆಗೆ ಸರಾಸರಿ 8 ಮಾಸ್ಕ್‍ಗಳನ್ನು ತಯಾರಿಸಲು ಸಾಧ್ಯ. ಇದುವರೆಗೆ1050 ಮಾಸ್ಕ್‍ಗಳನ್ನು ಜಿಲ್ಲಾಡಳಿತಕ್ಕೆ ಹೋಲಿದುಕೊಡಲಾಗಿದೆ ಎಂದುಎಸ್.ಡಿ.ಎಂಮಂಗಳಜ್ಯೋತಿ ಐ.ಟಿ.ಐ ಸಂಸ್ಥೆಯ ಪ್ರಾಂಶುಪಾಲರು ಶ್ರೀಯುತ ನರೇಂದ್ರಅವರು ತಿಳಿಸಿದರು.
ಸಾಂಕ್ರಾಮಿಕರೋಗದ ವಿರುದ್ಧದ ಹೋರಾಟದಲ್ಲಿ ಜಿಲ್ಲಾಡಳಿತದೊಂದಿಗೆ ಸಕ್ರಿಯವಾಗಿಕೈಜೋಡಿಸುವ ಮೂಲಕ ಎಸ್.ಡಿ.ಎಂ ಮಂಗಳಜ್ಯೋತಿ ಐ.ಟಿ.ಐ ಸಂಸ್ಥೆಯು ಸಹಾಯ ಹಸ್ತ ನೀಡುತ್ತಿದೆ.
