ಕೈಕಂಬ: ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಕಲ ಚೇತನರಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ದಾನಿಗಳಿಂದ ಮತ್ತು ಪಂಚಾಯತ್ ಸದಸ್ಯರ ಗೌರವಧನದಿಂದ ಸಂಗ್ರಹಿಸಿದ ಅಕ್ಕಿ,ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ಗ್ರಾ.ಪಂ.ನ ಅಧ್ಯಕ್ಷ ರಾದ ಶ್ರೀಮತಿ ಮಾಲತಿ, ಉಪಾಧ್ಯಾಕ್ಷರಾದ ಗೋಪಾಲ(ಗಂಗಾಧರ್) ಪಿಡಿಓ ಡಿ.ಎಂ ಭೋಗಮಲ್ಲಣ್ಣ,ಲೆಕ್ಕ ಸಹಾಯಕ ಇಸ್ಮಾಯಿಲ್,ಸರ್ವಸದಸ್ಯರು ಹಾಗೂ ಸಿಬ್ಬಂದಿ ವರ್ಗ ಇವರ ಸಮ್ಮುಖದಲ್ಲಿ ಮಂಗಳವಾರ ವಿತರಣೆ ಮಾಡಲಾಯಿತು.


