ಕೈಕಂಬ:ಸವಿತಾ ಸಮಾಜದ ವತಿಯಿಂದ ಎಡಪದವು, ಕುಪ್ಪೆಪದವು, ಮುಚ್ಚೂರು, ಮಿಜಾರು, ಮತ್ತು ಗಂಜಿಮಠ ವ್ಯಾಪ್ತಿಯ ಎಲ್ಲಾ ಸದಸ್ಯರಿಗೆ ಮತ್ತು ಬಡ ವರ್ಗದ ಸಮಾಜ ಭಾಂದವರ ಒಟ್ಟು 50 ಕುಟುಂಬಗಳಿಗೆ ನಿತ್ಯದ ರೇಶನ್ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಕೊರೋನ ಮಹಾಮಾರಿಯಿಂದಾಗಿ ಸೆಲೂನುಗಳು ಮುಚ್ಚಿದ್ದು ಬೇರೆ ಯಾವುದೇ ವ್ಯವಹಾರಗಳೂ ಇಲ್ಲದೆ ಸಮಾಜದ ಬಂಧುಗಳು ಹಾಗೂ ಬಡ ಸೆಲೂನ್ ಮಾಲಕರ ಸಂಸಾರ ನಿರ್ವಹಣೆಯ ದುಃಸ್ಥಿತಿ ಯನ್ನು ಮನಗಂಡು ವಲಯದ ಅಧ್ಯಕ್ಷರು ಹಾಗೂ ಸದಸ್ಯರ ಪೂರ್ಣ ಸಹಕಾರಗಳೊಂದಿಗೆ ಸಾಮಾಗ್ರಿಗಳನ್ನು ಮನೆಮನೆಗೆ ವಿತರಿಸಲಾಯಿತು.
