ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಯವಕರ ತಂಡವೊಂದು “ಆಸರೆ ಸೇವಾ ಫೌಂಡೇಶನ್ “ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಇದೀಗ ದೇಶದಲ್ಲೇ ಕೊರೋನ (ಕೋವಿಡ್- 19) ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ನಡೆಯುತ್ತಿರುವ ಲಾಕ್ ಡೌನ್ ಅವಧಿಯಲ್ಲಿ ಸೇವಾ ಭಾವನೆಯಿಂದ ಆಸರೆ ಸೇವಾ ಫೌಂಡೇಶನ್ ಇದರ ಸದಸ್ಯರು ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ತೀರ ಬಡತನದಲ್ಲಿರುವ 150 ಕುಟುಂಬಗಳಿಗೆ ದಿನನಿತ್ಯ ಬಳಕೆಯಾಗುವ ಸಾಮಾಗ್ರಿಗಳನ್ನು ವಿತರಿಸಿದರು.
ಬಡವರು ತಾನು ತೆಗೆದುಕೊಂಡ ಸಾಮಾಗ್ರಿಯಿಂದ ಮುಜುಗರಕ್ಕೊಳಗಾಗ ಬಾರದೆಂಬ ಉದ್ದೇಶ ದಿಂದ ಛಾಯಾಗ್ರಾಹಣ ವನ್ನು ನಿಷೇಧಿಸಿಲಾಗಿತ್ತು. ಈಸಂಧರ್ಭದಲ್ಲಿ “ಆಸರೆ ಸೇವಾ ಫೌಂಡೇಶನ್ ” ಇದರ ಅಧ್ಯಕ್ಷ ಚಂದ್ರಹಾಶ ಪಲ್ಲಿಪಾಡಿ , ಬಸೀರ್ ಗಾಣೆಮಾರ್, ವೀಣಾ ಆಚಾರ್ಯ , ಲಕ್ಷ್ಮೀಶ್ ಶೆಟ್ಟಿ,ರೋಶನ್ ಪುಂಚಮೆ,ರಾಜು ಕೋಟ್ಯಾನ್, ಮುಸ್ತಾಫ, ುಮೇಶ್ ಆಚಾರ್ಯ, ಜಗದೀಶ್ ಕರಿಯಂಗಳ, ಮಜೀದ್, ಪ್ರಶಾಂತ್ ಪದವು, ಅಜಯ್ , ವಾಮನ, ವಿಜಯ್, ಅಬ್ಬಾಸ್ ಗುಂಡಿಕುಮೇರ್, ಲತೀಫ್ ಕಲ್ಕುಟ,ನವಾಝ್ ಬಡಕಬೈಲ್ ಪ್ರೇಮ್ ನಾಥ್ ಚೇರಾ ಇದ್ದರು.
