ಬಂಟ್ವಾಳ : ದ.ಕ. ಜಿಲ್ಲೆಯ ಜನರಿಗೆ ದಿನಬಳಕೆ ವಸ್ತುಗಳ ಖರೀದಿಯ ದೃಷ್ಟಿಯಿಂದ ಮಾ. ೩೧ರಂದು (ಮಂಗಳವಾರ) ಬೆಳಗ್ಗೆ ೬ರಿಂದ ಮಧ್ಯಾಹ್ನ ೩ರ ವರೆಗೆ ದಿನಸಿ ಅಂಗಡಿಗಳನ್ನು ತೆರೆಯಲು ನಿರ್ಧರಿಸಿದ್ದು, ದಿನಸಿ ಅಂಗಡಿಯ ಪರವಾನಿಗೆ ಪಡೆದು ಸಾಮಾಗ್ರಿಯನ್ನು ದಾಸ್ತಾನಿಟ್ಟಿರುವ ದಿನಸಿ ಅಂಗಡಿದಾರರು ಕಡ್ಡಾಯವಾಗಿ ಅಂಗಡಿಯನ್ನು ತೆರೆಯಲೇಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.IMG-20200330-WA0026

ಸೋಮವಾರ ಬಿ.ಸಿ.ರೋಡಿನಲ್ಲಿರುವ  ಬಂಟ್ವಾಳ ಶಾಸಕರ ಕಚೇರಿಯಲ್ಲಿ  ತಾಲೂಕು ಮಟ್ಟದ  ಅಧಿಕಾರಿಗಳ ಸಭೆಯ ಬಳಿಕ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,ಅಂಗಡಿಯ ಮುಂಭಾಗ ಮಾರ್ಕಿಂಗ್ ಮಾಡಲಾಗುತ್ತಿದ್ದು ,ಸಾಮಾಗ್ರಿ ಖರೀದಿಯ ವೇಳೆ ಸಾಮಾಜಿಕ ಅಂತರವನ್ನು ಕಾಯ್ದಯಕೊಳ್ಳಬೇಕು ಎಂದರು.  ಸಾಮಾಜಿಕ ಅಂತರವನ್ನು ಕಾಪಾಡುವ ದೃಷ್ಟಿಯಿಂದ ಮಾರ್ಕಿಂಗ್ ಮಾಡುವುದಕ್ಕೆ ಸೂಚನೆ ನೀಡಲಾಗಿದ್ದು,ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ   ಗ್ರಾಮ ಕರಣಿಕರು, ಗ್ರಾಮ ಸಹಾಯಕರು, ಪಿಡಿಒಗಳು, ಟಾಸ್ಕ್ಪೋರ್ಸ್ ಸಮಿತಿಯವರು ಗಮನಹರಿಸಲಿದ್ದು, ಪುರಸಭಾ ವ್ಯಾಪ್ತಿಯಲ್ಲಿ  ಮುಖ್ಯಾಧಿಕಾರಿಯವರು ಅದನ್ನು ನೋಡಿಕೊಳ್ಳಲಿದ್ದಾರೆ.ಪ್ರತಿ ಮನೆಯಿಂದ ಒಬ್ಬರೇ ಬಂದು ಸಾಮಾಗ್ರಿಯನ್ನು ಖರೀದಿಸಬೇಕು ಎಂದರು.
ಮಗುವಿನ ಆರೋಗ್ಯ ಸ್ಥಿರ :
ತಾಲೂಕಿನ ಸಜೀಪನಡು ಗ್ರಾಮದ ಕೊರೊನಾ ಸೋಂಕು ದೃಢಪಟ್ಟ ೧೦ ತಿಂಗಳ ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಗ್ರಾಮದ ಎಲ್ಲಾ ೯೧೫ ಮನೆಗಳ ಮೇಲೆ ನಿಗಾ ವಹಿಸಲಾಗಿದೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಗ್ರಾಮದ ಜನತೆಗೆ ದಿನಸಿ ಸಾಮಾಗ್ರಿಗಳನ್ನೂ ಪ್ರತಿ ಮನೆಗಳಿಗೂ ತಲುಪಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.ಬಿಸಿಯೂಟಕ್ಕಾಗಿ ಶಾಲೆಗಳಿಗೆ ಪೂರೈಕೆಯಾದ ಅಕ್ಕಿಯನ್ನು ಪ್ರತಿ ವಿದ್ಯಾರ್ಥಿಗಳಿಗೆ ವಿತರಣೆಗೆ ಕ್ರಮಕೈಗೊಳ್ಳಲಾಗುತ್ತಿದ್ದು, ಹತ್ತಿರದ ಶಿಕ್ಷಕರು ಶಾಲೆಗೆ ಬಂದು ವಿದ್ಯಾರ್ಥಿಗಳ ಪೋಷಕರ ಮೂಲಕ ವಿತರಣೆಗೆ ಸೂಚಿಸಲಾಗಿದೆ. ಜತೆಗೆ ಗರ್ಭಿಣಿ-ಬಾಣಂತಿಯರಿಗಾಗಿ ಬಂದ ಪೌಷ್ಟಿಕ ಆಹಾರಗಳನ್ನೂ ಅಂಗನವಾಡಿ ಕಾರ್ಯಕರ್ತೆರ ಮೂಲಕ ವಿತರಣೆಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಮನೆ ಮನೆಗೆ ಆಹಾರ ತಲುಪಿಸುವ ಬಗ್ಗೆ ಚಿಂತನೆ ನಡೆಸಲಾಗಿದ್ದು,ಈ ದೆಸೆಯಲ್ಲಿ ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಕೃಷಿ ಕೆಲಸಗಳಿಗೂ ಯಾವುದೇ ಅಡ್ಡಿ ಪಡಿಸಲಾಗುವುದಿಲ್ಲ. ಕೃಷಿ ಕಟ್ಟಾವು ಯಂತ್ರಗಳಿಗೆ ಪಾಸ್ ನೀಡುವುದಕ್ಕೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಜತೆಯೂ ಚರ್ಚಿಸಲಾಗಿದೆ ಎಂದರು.
ಕೂಲಿಕಾರ್ಮಿಕರು, ನಿರ್ಗತಿಕರಿಗೆ ದೇವಸ್ಥಾನಗಳ ಮೂಲಕ ಊಟ ವಿತರಣೆಗೆ ಕ್ರಮಕೈಗೊಳ್ಳಲಾಗುತ್ತಿದ್ದು, ಅದಕ್ಕಾಗಿ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಜತೆಗೆ ಅಂತವರಿಗೆ ಕಿಟ್ ಕೊಡುವುದಕ್ಕೂ ಚರ್ಚೆ ನಡೆಯುತ್ತಿದೆ.
ಗ್ರಾಮೀಣ ಭಾಗಗಳಲ್ಲಿ ಹಾಲು ಸೇರಿದಂತೆ ದಿನಸಿ ಸಾಮಾಗ್ರಿಗಳು ಒಂದೇ ಅಂಗಡಿಗಳಲ್ಲಿದ್ದು, ಅಂತಹ ಅಂಗಡಿಗಳಲ್ಲಿ ನಿತ್ಯ ಹಾಲಿನ ಮಾರಾಟಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ. ದಿನಸಿ ಅಂಗಡಿಗಳಲ್ಲಿ ನಿಗದಿಗಿಂತ ಹೆಚ್ಚಿನ ದರ ಪಡೆಯುವ ದೂರುಗಳು ಬಂದಲ್ಲಿ ಅಂತಹವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ. ಜತೆಗೆ ದಿನಸಿ ಅಂಗಡಿಗಳಿಗೆ ರಖಂ ಅಂಗಡಿಗಳಿಂದ ಸಾಮಾಗ್ರಿಗಳನ್ನು ತರುವುದಕ್ಕೆ ಸ್ಥಳೀಯ ಗ್ರಾ.ಪಂ.ಗಳ ಮೂಲಕ ಪಾಸ್ ವಿತರಣೆಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
  ದೇಶ ಸೇವೆಗೆ ಸಮಾನ : ಶಾಸಕ ನಾಯ್ಕ್ :
ಇದೇ ವೇಳೆ ಹಾಜರಿದ್ದ ಶಾಸಕ ರಾಜೇಶ್ ನಾಯ್ಕ್  ಉಳಿಪ್ಪಾಡಿಗುತ್ತು ಮಾತನಾಡಿ, ಇಂತಹ ಕಠಿನ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಮನೆಯಲ್ಲಿದ್ದರೆ ಅದು ದೇಶಸೇವೆಗೆ ಸಮನಾಗುತ್ತದೆ. ಅಗತ್ಯ ಕೆಲಸಗಳ ಸಂದರ್ಭದಲ್ಲಿ ಪರಸ್ಪರ ಅಂತಹವನ್ನು ಕಾಯ್ದುಕೊಳ್ಳುವ ಮೂಲಕ ಕೊರೊನಾ ಮಾರಿಯನ್ನು ದೂರಮಾಡಬೇಕಿದೆ. ತಾಲೂಕಿನಲ್ಲಿ ಈ ಕುರಿತು ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸುಮಾರು ೩೪೫ ಆಶಾ ಕಾರ್ಯಕರ್ತೆಯರು ತಾಲೂಕಿನಲ್ಲಿ ಮನೆ ಭೇಟಿ ನಡೆಸುತ್ತಿದ್ದು,ಈಗಾಗಲೇ ಸುಮಾರು 6000 ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದ್ದಾರೆ ಎಂದರು.
ಮಾರ್ಚ್ 31ರಂದು ಬೆಳಗ್ಗೆ 6ರಿಂದ 3 ರವರೆಗೆ  ದಿನಸಿ ಅಂಗಡಿಗಳ ತೆರೆಯುವಿಕೆಗೆ ಜಿಲ್ಲಾಡಳಿತ   ನೀಡಿರುವ  ಅವಕಾಶದ ನೀಡಿದ್ದು ಸಂದರ್ಭದಲ್ಲಿ ಎಲ್ಲಾ ನಾಗರಿಕರು ಸಂಯಮದಿಂದ ವರ್ತಿಸಿ ಸಾಮಾಜಿಕ ಅಂತರವನ್ನು ಕೊಳ್ಳುವುದರ ಮೂಲಕ ಕೊರೋನ ವೈರಸ್ ಹರಡದಂತೆ ಜಿಲ್ಲಾಡಳಿತದ ಜೊತೆ ಸಹಕರಿಸುವಂತೆ ಅವರು ಮನವಿ ಮಾಡಿದರು.  ಕೆಲಸದ ಒತ್ತಡದ ನಡುವೆ ಮನೆಯೊಳಗೆ ಹೆಚ್ಚು ಹೊತ್ತು ಕಳೆಯುವುದು ಮರೆತು ಹೋದಂತಿತ್ತು, ಆದರೆ ಇದೀಗ ಕೊರೋನ ನಿಯಂತ್ರಣಕ್ಕೆ ಪ್ರತಿಯೊಬ್ಬರು ಮನೆಯೊಳಗಿದ್ದು ಪ್ರಧಾನಿ ನರೇಂದ್ರಮೋದಿಯವರ ಕರೆಯಂತೆ  ಸಂಪೂರ್ಣ ಲಾಕ್ ಡೌನ್ ಗೆ ಅವಕಾಶ ಮಾಡಿಕೊಡಬೇಕಾಗಿದೆ. ಮನೆಯ ಒಳಗೆ ಇರುವಂತಹ ಸಂದರ್ಭದಲ್ಲಿ ಮನಸ್ಸಿಗೆ ಕೆಲಸ ಕೊಡುವಂತಹ ವಿಚಾರಧಾರೆಗಳಲ್ಲಿ ತೊಡಗಿಸಿ, ಮನೆಮಂದಿಯೊಂದಿಗೆ ಸಂತಸದಿಂದ ಕಾಲಕಳೆಯುವಂತೆ ಶಾಸಕರು ಕಿವಿಮಾತು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದ ನಳಿನ್‌ಕುಮಾರ್ ಕಟೀಲು, ಬಂಟ್ವಾಳ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಬುಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *