ಕೈಕಂಬ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 30ರಂದು ಕೂಡ ಜಿಲೆಯಾದ್ಯಂತ ಸಂಪೂರ್ಣ ಬಂದ್ ಮುಂದುವರಿದಿದ್ದು ಕರಿಯಂಗಳ ಗ್ರಾಮ ಪಂಚಾಯತ್ ನಲ್ಲಿ ಕೋವಿಡ್ 19 ವಿಶೇಷ ಕಾರ್ಯಪಡೆಯ ತುರ್ತು ಸಮಾಲೋಚನಾ ಸಭೆಯು ಸೋಮವಾರ ನಡೆಯಿತು.
ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರಿಯಂಗಳ ಗ್ರಾಮದ 30 ಮನೆಯ ಅತೀ ಬಡಕುಟುಂಬವನ್ನು ಗುರುತಿಸಿ ಅವರಿಗೆ ಅಗತ್ಯ ವಸ್ತುಗಳ ಪೂರೈಕೆಯನ್ನು ಮಾಡುವುದಾಗಿ ತೀರ್ಮಾನಿಸಲಾಯಿತು. ಅಲ್ಲದೇ ವಲಸೆ ಕಾರ್ಮಿಕರಾಗಿ ದುಡಿಯಲು ಬಂದವರಿಗೆ ಅಗತ್ಯವಸುಗಳನ್ನು ನೀಡುವುದೆಂದು ಈ ಭಾಗದಲ್ಲಿ ಇದ್ದ ದಿನಸಿ ಅಂಗಡಿಗಳಿಗೆ ಮಂಗಳೂರಿನಿಂದ ಸಾಮಾನುಗಳನ್ನು ತರಳು ಪಂಚಾಯತಿಯಿಂದ ಪರ್ಮಿಸನ್ ನೀಡಲು ಒಪ್ಪಿಗೆ ನೀಡಲಾಯಿತು.
ಈ ಸಭೆಯಲ್ಲಿ ಕೊರೊನಾಗೆ ಸಂಬಂಧಪಟ್ಟ ಗ್ರಾಮಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ವರದಿಯ ಬಗ್ಗೆ ಚರ್ಚೆ ನಡೆಸಲಾಯಿತು. ಕರಿಯಂಗಳ ಗ್ರಾಮದಲ್ಲಿ ಈವರೆಗೆ ಯಾವುದೇ ಕೊರೊನಾ ಪ್ರಕರಣ ಪತೆಯಾಗಿಲ್ಲ ಎಂದು ಆರೋಗ್ಯ ಸಾಹಾಯಕ ಅಧಿಕಾರಿ ತಿಳಿಸಿದರು.ಸಭೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮ ನಾಯಕ್ , ತಾ. ಪಂ ಸದಸ್ಯ ಯಶವಂತ ಪೂಜಾರಿ, ಉಪಾಧ್ಯಕ್ಷ ಚಂದ್ರಶೇಖರ ರಾವ್ ಹಾಗೂ ಪಂಚಾಯತ್ ಸದಸ್ಯರು, ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.
