ಬಂಟ್ವಾಳ: ಕೊರೋನ ವೈರಸ್ ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಆದೇಶಿಸಿರುವ ಜನತಾ ಕರ್ಫ್ಯೂವಿನಿಂದಾಗಿ ತತ್ತರಿಸಿರುವ ಫರಂಗಿಪೇಟೆ ಆಸುಪಾಸಿನ ಬಡ ಕುಟುಂಬಗಳಿಗೆ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಜೀವನಾಶ್ಯಕ ವಸ್ತುಗಳನ್ನು ಭಾನುವಾರ ವಿತರಿಸಲಾಯಿತು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಅವರ ಮಾರ್ಗದರ್ಶನದಲ್ಲಿ ಟ್ರಸ್ಟಿಗಳಾದ ಜಯರಾಜ್ ಕರ್ಕೇರ ಮಂಟಮೆˌ ಪ್ರಮುಖರಾದ ಎಫ್. ಗಣೇಶ ಫರಂಗಿಪೇಟೆˌ ಮನೋಹರ ನಾಯ್ಕ್ ಅರ್ಕುಳˌ ಗಿರೀಶ್ ಪದೆಂಜಾರುˌ ವಿಕ್ರಮ್ ಬರ್ಕೆˌ ಸುಕೇಶ್ ಶೆಟ್ಟಿ ತೇವು ˌ ಸುಕುಮಾರ್ ಸಿಟಿ ಮೆಡಿಕಲ್ಸ್ ಫರಂಗಿಪೇಟೆ ಅವರು ಬಡ ಕುಟುಂಬಗಳ ಮನೆಗೆ ತೆರಳಿ ದಿನಬಳಕೆ ವಸ್ತುಗಳನ್ನು ವಿತರಿಸಿದರು.
