ದೆಹಲಿ:ಪ್ರಪಂಚದಾದ್ಯಂತ ಜೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಭಾರತದ 130 ಕೋಟಿ ಮಂದಿಯ ಆತಂಕಕ್ಕೆ ಕಾರಣವಾಗಿದೆ. ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಮಾ.22ರಂದು ಭಾನುವಾರ ಜನತಾ ಕರ್ಫ್ಯೂ ಆಚರಣೆಗೆ ಪ್ರಧಾನಿ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ.
ಜನಸಾಮಾನ್ಯರು ಅಂದು ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೆ ತಮ್ಮ ತಮ್ಮ ಮನೆಯಲ್ಲೇ ಇರಬೇಕು. ಯಾರೂ ಮನೆಯಿಂದ ಹೊರಗಡೆಗೆ ಬರಬೇಡಿ. ವೈದ್ಯಕೀಯ ತುರ್ತು ಅಗತ್ಯ ಇದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ ಎಂದು ದೇಶದ ಜನತೆಗೆ ಪ್ರಧಾನಿ ಮೋದಿ ಕರೆ.
ಕೊರೊನಾ ವೈರಸ್ ನಿಯಂತ್ರಣಕ್ಕೆ ಸರಕಾರ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ ಪರಿಸ್ಥಿತಿ ಕೈ ಮೀರಿದೆ. ಎಲ್ಲರೂ ಸರಕಾರ, ಸ್ಥಳಿಯಾಎಳಿತದ ಜತೆ ಸಹಕರಿಸಿ ಈ ಮಹಾ ಮಾರಿಯ ನಿಯಂತ್ರಣಕ್ಕೆ ಕೈ ಜೋಡಿಸಲು ಮೋದಿ ವಿನಂತಿಸಿದ್ದಾರೆ.
