ಕೈಕಂಬ:ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 3ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳೂರು ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.
ಮುಖ್ಯಮಂತ್ರಿ ವಿಶೇಷ ಅನುದಾನದಿಂದ 1ಕೋಟಿ, ಮಳೆಹಾನಿ ಕಾಮಗಾರಿ ಕೆ.ಆರ್.ಐ.ಡಿ.ಎಲ್ ನಿಂದ 50 ಲಕ್ಷ, ಎಸ್.ಸಿ.ಕಲೋನಿ 8 ಲಕ್ಷ, ಟಾಸ್ಕ್ ಫೋರ್ಸ್ 4ಲಕ್ಷ, ಶಾಸಕರ ಪ್ರದೇಶಾಭಿವೃಧ್ದಿ ನಿಧಿಯಿಂದ 11 ಲಕ್ಷ, ಸಿಎಂ ಜೆ.ಎಸ್.ವೈ ಮಳೆಹಾನಿ ಕಾಮಗಾರಿ 1 ಕೋಟಿ 27 ಲಕ್ಷ ಒಟ್ಟು 3ಕೋಟಿ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಗುರುಪುರ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸೋಹನ್ ಅತಿಕಾರಿ, ಪ್ರಧಾನ ಕಾರ್ಯದರ್ಶಿ ಶಿವರಾಜ್ ನಾರ್ಲ, ಗಂಜಿಮಠ ಪಂಚಾಯತ್ ಸದಸ್ಯ ನೋಣಯ್ಯ ಕೋಟ್ಯಾನ್, ಮಾಧವ ಕಾಜಿಲ, ಮಲ್ಲಿಕಾ ಶೆಟ್ಟಿ ಮಟ್ಟಿ, ಗೀತಾ, ಸಂದೀಪ್ ಶೆಟ್ಟಿ, ಜಯಾನಂದ ಕುಲಾಲ್, ಹಾಗೂ ಸ್ಥಳೀಯ ಬಿಜೆಪಿ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.


