ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಶಿಫಾರಸ್ಸಿನ ಮೇರೆಗೆ  ಮಳೆಹಾನಿ ಯೋಜನೆಯಲ್ಲಿ ಬಂಟ್ವಾಳ ವಿಧಾನಸಭಾ  ಕ್ಷೇತ್ರದ ವಿವಿಧ ರಸ್ತೆ ಕಾಮಗಾರಿಗಳ ಅಭಿವೃದ್ಧಿ ಕಾಮಗಾರಿಗೆ 14. 79 ಕೋಟಿ ರೂ. ಅನುದಾನ ಮಂಜೂರು ಮಂಜೂರುಗೊಂಡಿದೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.

FB_IMG_1583752959550 ಈ ಅನುದಾನವನ್ನು ಕ್ಷೇತ್ರದ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಹಂಚಿಕೆ ಮಾಡಲಾಗಿದ್ದು, ಈ ಅನುದಾನ  ಕಾಮಗಾರಿಗಳಿಗೆ ಮಾ.14  ಮತ್ತು15 ರಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶಿಲಾನ್ಯಾಸ ನೆರೆವೇರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಎಲ್ಲೆಲ್ಲಿ ಕಾಮಗಾರಿಗೆ ಶಿಲಾನ್ಯಾಸ:ಮಾ.14 ರಂದು  ಕರಿಯಂಗಳ ಗ್ರಾಮದ ಪುಂಚಮೆ-ಪಲ್ಲಿಪಾಡಿ ರಸ್ತೆ  (86 ಲಕ್ಷ), ಕಳ್ಳಿಗೆ ಗ್ರಾಮದ ಬ್ರಹ್ಮರಕೊಟ್ಲು-ಕಳ್ಳಿಗೆ ರಸ್ತೆ  (80 ಲಕ್ಷ), ಬಾಳ್ತಿಲ ಗ್ರಾಮದ ಸಣ್ಣಕುಕ್ಕು-ದಾಸಕೋಡಿ ರಸ್ತೆ  (1.50 ಕೋಟಿ), ಅನಂತಾಡಿ ಗ್ರಾಮದ ಅನಂತಾಡಿ-ಕೊಂಬಿಲ ರಸ್ತೆ  (1.50 ಕೋಟಿ), ನಾವೂರು, ಸರಪಾಡಿ ಗ್ರಾಮದ ಮಣಿಹಳ್ಳ-ಅಲ್ಲಿಪಾದೆ-ಅಜಿಲಮೊಗರು ರಸ್ತೆ  (1.70 ಕೋಟಿ), ಸರಪಾಡಿ ಗ್ರಾಮದ ಕುಂಟಾಲಪಲ್ಕೆ ರಸ್ತೆ  (98 ಲಕ್ಷ), ಮಣಿನಾಲ್ಕೂರು ಗ್ರಾಮದ ಗಂಡಿ ಕೊಟ್ಟಿಂಜ ರಸ್ತೆ (65 ಲಕ್ಷ), ಬಡಗಕಜೆಕಾರು ಗ್ರಾಮದ ನರ್ಸಿರಕುಮೇರು-ಪಾಂಡವರಕಲ್ಲು ರಸ್ತೆ (1.35 ಕೋಟಿ), ಹಾಗೆಯೇ ಮಾ.15 ರಂದು  ಕರೋಪಾಡಿ ಗ್ರಾಮದ ಒಡಿಯೂರು ಪಲ್ಲದಕೋಡಿ ಪದ್ಯಾಣ ರಸ್ತೆ  (2.25 ಕೋಟಿ), ಕರೋಪಾಡಿ ಗ್ರಾಮದ ಅರಸೋಳಿಗೆ ರಸ್ತೆ (60 ಲಕ್ಷ), ಕೊಳ್ನಾಡು ಗ್ರಾಮದ ಕುಳಾಲು ರಸ್ತೆಗೆ ((2.50 ಕೋಟಿ) ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

 

By suddi9

Leave a Reply

Your email address will not be published. Required fields are marked *