ಬಂಟ್ವಾಳ: ರಾಜಕಾರಣಿಗಳ ನಿವಾಸ,ಕಚೇರಿ ಮುಂದೆ  ವಾಮಚಾರ ನಡೆಯುವುದನ್ನು ಕೇಳಿದ್ದೇವೆ ಮತ್ತು ಕಂಡಿದ್ದೆವೆ  ಆದರೆ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಎಂಬಲ್ಲಿ ಸಹಕಾರ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂಬ ಉದ್ದೇಶದಿಂದ ಸಹಕಾರಿ ಸಂಘದ ಕಚೇರಿ ಮುಂದೆ ವಾಮಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

17-37-24-IMG-20200310-WA0026
ವಿಚಿತ್ರವೆಂದರೆ ವಾಮಾಚಾರ ಮಾಡಿಸಿರುವ ಸ್ಥಳೀಯ ಗ್ರಾಪಂ ಸದಸ್ಯ ಮತ್ತು ಮಂತ್ರವಾದಿ ಮಂಗಳವಾರ ನಡೆದ ಮಣಿನಾಲ್ಕೂರು ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಯ  ಸಭೆಗೆ ಅಗಮಿಸಿ ತಾವು ಮಾಡಿರುವ ಕೃತ್ಯವನ್ನು ಒಪ್ಪಿಕೊಂಡಿದ್ದಾರಲ್ಲದೆ ತಪ್ಪೊಪ್ಪಿಗೆ ಲಿಖಿತ ಪತ್ರವನ್ನು ನೀಡಿದ ಹಿನ್ನಲೆಯಲ್ಲಿ ಪ್ರಕರಣವನ್ನು ಇತ್ಯರ್ಥ ಮಾಡಲಾಗಿದೆ. ಫೆ.23 ಮಣಿನಾಲ್ಕೂರು ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆದಿತ್ತು.

17-37-18-IMG-20200310-WA0025ಈ ಚುನಾವಣೆಯಲ್ಲಿ ಎಲ್ಲಾ 13 ಸ್ಥಾನವನ್ನು ಬಿಜೆಪಿ ಬೆಂಬಲಿತರು ಜಯಭೇರಿ ಸಾಧಿಸಿದ್ದರು.  ಮಾ.3 ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿತ್ತು. ಆದರೆ ಈ ವೆರಗೂ ಸಂಘದ ಕಚೇರಿ ಮುಂದೆ ನಡೆದಿದೆಯೆನ್ನಲಾದ ವಾಮಾಚಾರದ ಕುರಿತು ಯಾವುದೇ ಕುರುಹು ಪತ್ತೆಯಾಗಿರಲಿಲ್ಲ.ಚುನಾವಣಾ ಪ್ರಕ್ರಿಯೆಗಳೆಲ್ಲಾ ಸುಸೂತ್ರವಾಗಿಯೇ ಮುಗಿದಿತ್ತು.  ಕುಂಕುಮ ನೀರು ಮತ್ತು ತಾಮ್ರದ ತಗಡೊಂದರ ತುಂಡು ಇದ್ದ ಬಾಟ್ಲಿ  ಸಂಘದ ಕಚೇರಿ ಮುಂದೆ ವ್ಯಕ್ತಿಯೊಬ್ಬರಿಗೆ ಕಂಡು ಬಂದಿತ್ತು. ಈಚೆಗೆ ಸುರಿದ ಮಳೆಯಿಂದ ವಾಮಾಚಾರ ಮಾಡಿ ಮಣ್ಣಿನಡಿಯಲ್ಲಿ ಹೂತಿಟ್ಟ ಈ ಬಾಟ್ಲಿ ಮಣ್ಣ ಕರಗಿ ಮೇಲಕ್ಕೆ ಬಂದಿದೆ.ಇದನ್ನು ಗಮನಿಸಿದ ವ್ಯಕ್ತಿ ಸಂಘದ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದರು. ತಕ್ಷಣ ಎಲಟ್೯ ಆದ ಆಡಳಿತ ಮಂಡಳಿ ಮಾ.4 ರಂದು ಸಹಕಾರ ಸಂಘದ  ಸಿಸಿ ಕ್ಯಾಮಾರದಲ್ಲಿ ಪರಿಶೀಲಿಸಿದರು. ಅದರಲ್ಲಿ   ಫೆ.19 ರಂದು ರಾತ್ರಿ 9.47 ನಿಮಿಷಕ್ಕೆ ಸಹಕಾರಿ ಸಂಘದ ಅವರಣ ಗೋಡೆಯ ಬಳಿ ಗಾಜಿನ ಬಾಟಲಿಯನ್ನು ತಂದು ಮಣ್ಣಿನಡಿಯಲ್ಲಿ ಹೂತಿಡುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿರುವುದು ದೃಢಪಟ್ಟಿದೆ. ಅದರಂತೆ ಸೋಮವಾರ ಸಂಘದ ಆಡಳಿತ ಮಂಡಳಿ ತುರ್ತುಸಭೆ ಕರೆದು ಸಿಸಿ ಕ್ಯಾಮಾರದಲ್ಲಿ ಕಂಡುಬಂದಂತೆ ಸ್ಥಳೀಯ ಗ್ರಾಪಂ ಸದಸ್ಯ ಆದಂಕುಂಞ ಹಾಗೂ ಮಂತ್ರವಾದಿ ಉಮೇಶ್ ಶೆಟ್ಟಿ ಅವರನ್ನು ಕರೆಸಿದರು.ಇಲ್ಲಿ ಇವರಿಬ್ಬರು      ಸಹಕಾರಿ ಬ್ಯಾಂಕ್ ನಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ಸಹಕಾರಿ ಸಂಘದ ಕಚೇರಿಯ ಆವರಣದಲ್ಲಿ ವಾಮಚಾರ ಮಾಡಿದ್ದೇವೆ.ನಾವು ಮಾಡಿರುವ ಕೃತ್ಯಕ್ಕೆ ಕ್ಷಮೆ ಕೋರುತ್ತವೆ. ಭವಿಷ್ಯದಲ್ಲಿ ಇಂತಹ ಯಾವುದೇ ರೀತಿಯ ಕೃತ್ಯ ಮಾಡುವುದಿಲ್ಲ ಎಂದು ತಪ್ಪೊಪ್ಪಿಕೊಂಡ ಹಿನ್ನಲೆಯಲ್ಲಿ  ಈ ಪ್ರಕರಣವನ್ನು ಇತ್ಯರ್ಥ ಪಡಿಸಲಾಯಿತು. ಈ ಕೃತ್ಯದ ಬಗ್ಗೆ  ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

By suddi9

Leave a Reply

Your email address will not be published. Required fields are marked *