ಕೈಕಂಬ:ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿ ದೇವಾಡಿಗ ಸಮಾಜ ಶ್ರೀ ಪೊಳಲಿ ಷಷ್ಠಿರಥ ಸಮರ್ಪಣಾ ಸಮಿತಿ ಇವರಿಂದ ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರೀ ದೆವಿಗೆ ಸಮಸ್ತ ದೇವಾಡಿಗ ಸಮಾಜದ ವತಿಯಿಂದ ದೊಡ್ಡರಂಗಪೂಜಾ ಉತ್ಸವದೊಂದಿಗೆ ಮಾ.8 ಅದಿತ್ಯವಾರದಿಂದ ಮಾ.12 ಗುರುವಾರದವರೆಗೆ ನೂತನ ಷಷ್ಠಿರಥವನ್ನು ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿ ಇವರ ನೇತೃತ್ವದಲ್ಲಿ ಕ್ಷೇತ್ರದ ಪವಿತ್ರಪಾಣಿ ಪೊಳಲಿ ಶ್ರೀ ಮಾಧವ ಭಟ್ ಮತ್ತು ಕ್ಷೇತ್ರದ ಅರ್ಚಕ ವೃಂದದವರ ಮಾರ್ಗದರ್ಶನದಲ್ಲಿ ಹೊರಕಾಣಿಕೆ, ವೈದಿಕ, ಧಾರ್ಮಿಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಸಮರ್ಪಣೆಯಾಗಲಿದೆ.

IMG-20200306-WA0044
ಮಾ.11 ಬುಧವಾರ ಬೆಳಿಗ್ಗೆ 6ರಿಂದ ಕಲಶ ಪೂಜೆ,ಅಧಿವಾಸ ಹೋಮ,ರಥ ಕಲಶ ಪೂಜೆ, ಕಲಶಾಭಿಷೇಕ, ಬೆಳಿಗ್ಗೆ 9ರಿಂದ 10.30ರವರೆಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕ್ರತ ನಾಗಸ್ವರ ವಿದ್ವಾನ್ ಶ್ರೀ ನಾಗೇಶ್ ಬಪ್ಪನಾಡು ಮತ್ತು ಬಳಗದವರಿಂದ ಶಾಸ್ರೀಯ ನಾಗಸ್ವರ ಕಛೇರಿ, ಮಧ್ಯಾಹ್ನ 10.30 ರಿಂದ 12.30ರವರೆಗೆ ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿ ಪೊಳಲಿ ಹಾಗೂ ಶ್ರೀ ನಿತ್ಯಾನಂದ ಚಾಮುಂಡಿ ಭಜನಾ ಮಂಡಳಿ ಮುಂಬೈ, ಸಾಕಿನಾಕ ಇವರಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ 12.30ರಿಂದ 1.30ರವರೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ನಾಗಸ್ವರ ವಿದ್ವಾನ್ ಶ್ರೀ ಧರ್ಮಸ್ಥಳ ಅಣ್ಣು ದೇವಾಡಿಗ ಮತ್ತು ಬಳಗದವರಿಂದ ನಾಗಸ್ವರ ವಾದನ ಕಾರ್ಯಕ್ರಮ.ಬೆಳಿಗ್ಗೆ 11ಕ್ಕೆ ಶ್ರೀ ದೇವಿಗೆ ನೂತನ ಷಷ್ಠಿರಥ ಸಮರ್ಪಣೆ, ರಥೋತ್ಸವ, 12.30 ಪಲ್ಲ ಪೂಜೆ, ಮಧ್ಯಾಹ್ನ 1.30ಕ್ಕೆ ಅನ್ನ ಸಂತರ್ಪಣೆ.
ಸಾಯಂಕಲ 6ಕ್ಕೆ ನಿತ್ಯ ಪೂಜೆ, ರಾತ್ರಿ 7ರಂದ 10ರವರೆಗೆ ಶ್ರೀ ಅಗಸ್ತ್ಯೇಶದವರ ನೃತ್ಯ ಭಜನಾ ಮಂಡಳಿ ಪೊಳಲಿ, ಶ್ರೀ ಒಂಕರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಮತ್ತು ಶ್ರೀ ಸುಬ್ರಮಣ್ಯ ನೃತ್ಯ ಭಜನಾ ಮಂಡಳಿ ನೀರುಮಾರ್ಗ ಇವರಿಂದ ಭಜನಾ ಸಂಕೀರ್ತನೆ ಕಾರ್ಯಕ್ರಮ, ರಾತ್ರಿ -7 ರಿಂದ ದೊಡ್ಡರಂಗಪೂಜೆ, ರಾತ್ರಿ 8.30ರಿಂದ ಉತ್ಸವ, ರಥೋತ್ಸವ, ವಸಂತ ಕಟ್ಟೆ ಪೂಜೆ, ಅಷ್ಠಾವದಾನ, ಪಲ್ಲಕ್ಕಿ ಉತ್ಸವ, ಪೀಠ ಪೂಜೆ, ಬೆಳಿಗ್ಗೆ 8ಕ್ಕೆ ಉದ್ಘಾಟನಾ ಸಮಾರಂಭ, ಮಧ್ಯಾಹ್ನ 3.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ.
ಮಾ.12 ರಂದು ಕಲಶ ಪೂಜೆ, ಗಣಹೋಮ, ಪ್ರಧಾನಹೋಮ, ಕಲಶಾಭಿಷೇಕ, ಸಂಪ್ರೋಕ್ಷಣೆ,ಮಾಧ್ಯಹ್ನ:12.30ಕ್ಕೆ ಮಹಾಪೂಜೆ, ಮಂತ್ರಾಕ್ಷತೆ ನಡೆಯಲಿದೆ.

By suddi9

Leave a Reply

Your email address will not be published. Required fields are marked *