ಬಂಟ್ವಾಳ:ಬಂಟ್ವಾಳ ತಾಲೂಕಿನ ರಾಯಿ ಸಮೀಪದ ಕೈತ್ರೋಡಿ ಗಾಣದಮನೆ ನಿವಾಸಿ, ಪ್ರಗತಿಪರ ಕೖಷಿಕ ಕೆ.ಶೀನ ಸಪಲ್ಯ ಕೈತ್ರೋಡಿ (78) ಇವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮಾ.7ರಂದು ಶನಿವಾರ ತಡರಾತ್ರಿ ನಿಧನರಾದರು.

bdf80802-6278-4dd5-aa7d-ea5c0af8fab7
ಮೖತರು ಪತ್ನಿ ಮತ್ತು ಪತ್ರಕತ೯ ಮೋಹನ್ ಕೆ.ಶ್ರೀಯಾನ್ ಸಹಿತ ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಮಂದಿ ಬಂಧು ವಗ೯ವನ್ನು ಅಗಲಿದ್ದಾರೆ. ಬಾಲ್ಯದಲ್ಲಿ ಕುಲಕಸುಬು ಗಾಣ ವೖತ್ತಿ ನಡೆಸುತ್ತಿದ್ದ ಇವರು ಬಳಿಕ ಮೇಸ್ತ್ರಿಯಾಗಿ, ಪ್ರಗತಿಪರ ಕೖಷಿಕರಾಗಿ, ನಾಟಿ ವೈದ್ಯರಾಗಿ ಅವಿಭಜಿತ ಜಿಲ್ಲೆಯ ಅಪಾರ ಮಂದಿಗೆ ಉಚಿತ ನಾಟಿ ಔಷಧಿ ವಿತರಿಸುತ್ತಿದ್ದರು. ಮೖತರ ಅಂತ್ಯಕ್ರಿಯೆ ಮನೆ ಸಮೀಪದಲ್ಲಿ ಭಾನುವಾರ ಮಧ್ಯಾಹ್ನ ನಡೆಯಲಿದೆ.

By suddi9

Leave a Reply

Your email address will not be published. Required fields are marked *