ಬಂಟ್ವಾಳ:   ಬಿ.ಸಿ.ರೋಡಿನ  ಹಿರಿಯ ಛಾಯಾಗ್ರಾಹಕ, ಕಲಾವಿದ  ಮಾಲಕ ಪದ್ಮನಾಭ ರಾವ್ (63) ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ರಾತ್ರಿ ಗದಗದ ಸಂಬಂಧಿಕರ ಮನೆಯಲ್ಲಿ ನಿಧನರಾಗಿದ್ದಾರೆ.
ಬಿ.ಸಿ.ರೋಡು ಪರಿಸರದಲ್ಲಿ ಪದ್ದಣ್ಣ ಎಂದೇ ಚಿರಪರಿಚಿತರಾಗಿರುವ ಅವರು ಪಲ್ಲವಿ ಸದಟುಡಿಯೋವನ್ನು ನಡೆಸಿಕೊಂಡು ಬರುತ್ತಿದ್ದರು‌.IMG-20200123-WA0002-696x695

ಆನಾರೋಗ್ಯದ ಹಿನ್ನಲೆಯಲ್ಲಿ ಕೆಲದಿನಗಳ ಹಿಂದೆ ಇವರನ್ನು  ಗದಗಕ್ಕೆ ಕರೆದುಕೊಂಡು ಹೋಗಲಾಗಿತ್ತು.ಅಲ್ಲಿ ಅವರು ಗದಗದಲ್ಲಿ ಕೊನೆಯುಸಿರೆಳೆದಿದ್ದಾರೆಬಂಟ್ವಾಳ ಪೋಟೋ ಗ್ರಾಫರ್ಸ್ ಸಂಘದ ಅಧ್ಯಕ್ಷರಾಗಿಯು ಕಾರ್ಯನಿರ್ವಹಿಸಿದ್ದ ಇವರು.
ಸಾಮಾಜಿಕ ಚಟುವಟಿಕೆಯಲ್ಲು ತೊಡಗಿಸಿಕೊಂಡಿದ್ದರು.ಹಲವು ನಾಟಕಗಳಲ್ಲಿ ಪಾತ್ರವನ್ನು ಮಾಡಿದ್ದರು.ಮೃತರು ಪತ್ನಿ ಹಾಗೂ ಒಂದು ಗಂಡು ಮತ್ತು ಹೆಣ್ಣು ಮಗಳ ಸಹಿತ ಬಂಧುಬಳಗವನ್ನು ಅಗಲಿದ್ದಾರೆ.ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಪ್ರೆಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಮಾಜಿ ಪುರಸಭಾ ಸದಸ್ಯ ಮೋಹನ್ ಬಿ, ಛಾಯಾಗ್ರಾಹಕ ಸಂಘದ ಜಿಲ್ಲಾಧ್ಯಕ್ಷ ಶ್ರೀದರ್ ಶೆಟ್ಟಿಗಾರ್ , ತಾಲೂಕು ಅದ್ಯಕ್ಷ ಕುಮಾರಸ್ವಾಮಿ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *