ಬಂಟ್ವಾಳ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ವಗ್ಗ ಎಂಬಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ.ವಗ್ಗ ಕಾರಿಂಜಕೋಡಿ ನಿವಾಸಿ ಅರವಿಂದ ರಾವ್ ಅವರ ಪುತ್ರ ವಿದ್ಯಾರ್ಥಿ ನಂದನ್ (17) ಆತ್ಮಹತ್ಯೆ ಮಾಡಿಕೊಂಡವನಾಗಿದ್ದಾನೆ.
ಎಸ್.ಎಸ್. ಎಲ್.ಸಿ.ಯಲ್ಲಿ 94 ಪರ್ಸೆಂಟ್ ಮಾರ್ಕ್ಸ್ ಪಡೆದಿದ್ದ ಯುವಕ ಪಿಯುಸಿ ಯಲ್ಲೂ ಅಷ್ಟೇ ಪ್ರತಿಭಾವಂತನಾಗಿದ್ದ.ಪ್ರಸ್ತುತ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು ,ಭೌತಶಾಸ್ತ್ರ ಪರೀಕ್ಷೆ ಬರೆದಿದ್ದ. ಭೌತಶಾಸ್ತ್ರ ಪತ್ರಿಕೆ ಕಷ್ವವಿತ್ತು ಹಾಗಾಗಿ ಈತ ನಿರೀಕ್ಷೆ ಮಾಡಿದ ಅಂಕಗಳು ಬರಲಿಕ್ಕಿಲ್ಲ ಎಂಬ ಭಾವನೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೈದಿದ್ದಾನೆ.ರಾತ್ರಿ ಸುಮಾರು 12 ಗಂಟೆಯವರೆಗೂ ಈತ ಒದಿಕೊಂಡಿದ್ದು, 12 .30ರ ಹೊತ್ತಿಗೆ ಎಚ್ಚರಗೊಂಡ ತಾಯಿ ನೋಡಿದಾಗ ಈತ ಮನೆಯಲ್ಲಿರಲಿಲ್ಲ. ಕೂಡಲೇ ಹುಡುಕಾಟ ನಡೆಸಿದಾಗ ಆತನ ಮೊಬೈಲ್ ಫೋನ್ ತೋಟದಲ್ಲಿ ಪತ್ತೆಯಾಗಿದೆ.ಅಲ್ಲೇ ಪಕ್ಕದ ಬಾವಿಯಲ್ಲಿ ಈತನ ಮೃತದೇಹ ಪತ್ತೆಯಾಗಿದೆ.ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಎಸ್. ಐ. ಪ್ರಸನ್ನ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

