ಮಂಗಳೂರು:ಜೀವನದಲ್ಲಿ ಶಿಸ್ತು – ಶೀಲ – ಶಿಕ್ಷಣ ಅತೀ ಮುಖ್ಯ ವಾದುದು. ಶಿಸ್ತು ಇದ್ದಲ್ಲಿ ಶೀಲ ಮತ್ತು ಶೀಲವಿದ್ದಲ್ಲಿ ಶಿಕ್ಷಣ ಇರುತ್ತದೆ ಎಂದು ನಿವೃತ್ತ ಮುಖ್ಯೊಪಾಧ್ಯಾಯರೂ, ಕೃಷಿಕರೂ ಆದ ಹಾವಂಜೆ ಶ್ರೀ ಮನ್ಮಥ ಶೆಟ್ಟಿ ಹೇಳಿದರು. ಮಣಿಪಾಲದ ಮಾಧವ ಕೃಪಾ ಶಾಲೆಯಲ್ಲಿ ದಿನಾಂಕ 27-02-2020ರ ಗುರುವಾರದಂದು ಏರ್ಪಡಿಸಿದ ‘ರೈತರ ದಿನಾಚರಣೆ’ ಕಾರ್ಯಕ್ರಮದ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಾ
ಕೃಷಿಯ ಬೆಳವಣಿಗೆ, ಅದರ ಪ್ರಗತಿ, ತೋಟಗಾರಿಕೆಯ ಬಗ್ಗೆ ಸವಿವರವಾದ ಮಾಹಿತಿ ನೀಡಿದರು. ಕೃಷಿ ಬಳಕೆಯ ವಸ್ತುಗಳ ಪ್ರದರ್ಶನ, ಮಕ್ಕಳ ನೃತ್ಯ, ನಾಟಕಾಭಿನಯದಿಂದ ಕೂಡಿದ ಈ ಕಾರ್ಯಕ್ರಮದಲ್ಲಿ ಅತಿಥಿಗಳು ಬಹುಮಾನ ವಿತರಣೆಯನ್ನು ಮಾಡಿದರು.
ವೇದಿಕೆಯಲ್ಲಿ ಶಾಲೆಯ ಸಂಚಾಲಕರಾದ ಶ್ರೀ ಪಿ.ಜಿ.ಪಂಡಿತ್, ಪ್ರಾಂಶುಪಾಲರಾದ ಶ್ರೀಮತಿ ಜೆಸ್ಸಿ ಆಂಡ್ರ್ಯೂಸ್, ಉಪಪ್ರಾಂಶುಪಾಲೆಯರಾದ ಶ್ರೀಮತಿ ಶಕಿಲಾಕ್ಷಿ ಕೃಷ್ಣ, ಶ್ರೀಮತಿ ಜ್ಯೋತಿ ಸಂತೋಷ್, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಆಶಾ ನಾಯಕ್ ಉಪಸ್ಥಿತರಿದರು.
ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ನಿಯಮ್ ಮತ್ತು ಪ್ರಿಯಲ್ ಸ್ವಾಗತಿಸಿ, ಅರ್ಪಿತಾ ಧನ್ಯವಾದ ಸಮರ್ಪಿಸಿದರು. ಸಾನ್ವಿಕಾ ಮತ್ತು ಶ್ರಾವ್ಯಾ ಕಾರ್ಯಕ್ರಮ ನಿರ್ವಹಿಸಿ, ಪ್ರಾಥಮಿಕ ವಿಭಾಗದ ಶಿಕ್ಷಕಿಯರಾದ ಶ್ರೀಮತಿ ರಾಧಿಕಾ ಅತಿಥಿಗಳನ್ನು ಪರಿಚಯಿಸಿ, ಶ್ರೀಮತಿ ಪೂಜಾ ವಿಜಯ್ ಬಹುಮಾನ ವಿಜೇತರ ಹೆಸರುಗಳನ್ನು ವಾಚಿಸಿದರು. ಶ್ರೀಮತಿ ನವ್ಯ ಅಕ್ಷತ್ ಮತ್ತು ನವ್ಯ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು.

