ಬಂಟ್ವಾಳ: ತಾಲೂಕಿಗೆ ಸಂಬಂಧ ಪಟ್ಟ ಪಾಣೆಮಂಗಳೂರು ಹೋಬಳಿಯ ನರಿಕೊಂಬು. ಶಂಭೂರು. ಪಾಣೆಮಂಗಳೂರು. ಬಂಟ್ವಾಳ ಮೂಡ ಗ್ರಾಮಗಳ ಕಂದಾಯ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮ ನರಿಕೊಂಬು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆಯಿತು.
ತಾಲೂಕು ಕಚೇರಿಯ ಭೂಮಿ ಶಾಖೆಯ ಶಿರಸ್ತೇದಾರ್ ಶ್ರೀಧರ್ ಕಂದಾಯ ಅದಾಲತ್ ನ ಉದ್ದೇಶನ್ನು ವಿವರಿಸಿ, ಪಹಣಿ ಪತ್ರಿಕೆ ಯಲ್ಲಿ ಲೋಪದೋಷಗಳಿದ್ದರೆ ಪಹಣಿ ಸರಿಪಡಿಸುವಿಕೆ, ಪಹಣಿ ಶುದ್ಧೀಕರಣ. ಪಿಂಚಣಿಗೆ ಸಂಬಂದಿಸಿದಂತೆ ಮಾಸಾಶನ ಪಡೆಯುವ ಬಡ ಫಲಾನುಭವಿಗಳಿಗೆ ಯಾವುದೇ ರೀತಿಯ ಕುಂದುಕೊರತೆ ಬಾರದಂತೆ ನೋಡಿ ಕೊಳ್ಳುವ ನಿಟ್ಟಿನಲ್ಲಿ ಪಿಂಚಣಿ ಅದಾಲತ್ಹಮ್ಮಿಕೊಳ್ಳಲಾಗಿದೆ.ಸಾರ್ವಜನಿಕರು ಈ. ಅದಾಲತ್ ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರ್. ಆರ್ ಟಿ. ಶಾಖೆಯ ರೇಖಾ,ಅಭಿವೃದ್ಧಿ ಅಧಿಕಾರಿ ಶಿವು ಜನಕೊಂಡ, ಬಿ ಮೂಡ ಗ್ರಾಮ ಲೆಕ್ಕಾಧಿಕಾರಿ ನಾಗರಾಜ್ ಪಾಣೆಮಂಗಳೂರು ಗ್ರಾಮ ಲೆಕ್ಕಾಧಿಕಾರಿ ವಿಜೇತ ನರಿಕೊಂಬು ಗ್ರಾಮ ಲೆಕ್ಕಾಧಿಕಾರಿ ಆಥಿಕ್ ಕುಮಾರ್ ಹಾಜರಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ದಿವಾಕರ ಶಂಭೂರು. ಜಯರಾಜ್.ರಂಜಿತ್ ನರಿಕೊಂಬು ಉಪಸ್ಥಿತರಿದ್ದರು. ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಸ್ವಾಗತಿಸಿ, ವಂದಿಸಿದರು.